ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, 7 ಶಾಸಕರಿಗೆ ಸಚಿವ ಸ್ಥಾನ; ಯಾರ ಹೆಸರು ಅಂತಿಮ.?
ಅಂತೂ ಇಂತೂ ಸಂಪುಟ ವಿಸ್ತರಣೆ ಕಗ್ಗಂಟು ಬಗೆಹರಿದಿದೆ. ಸಂಕ್ರಾಂತಿಗೂ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಸಿಹಿ ಸಿಗಲಿದೆ. ಜನವರಿ 13 ರಂದು ಸಂಪುಟ ವಿಸ್ತರಣೆ ನಡೆಯಲಿದೆ ಎಂದು ದೆಹಲಿ ಭೇಟಿ ಬಳಿಕ ಸಿಎಂ ಬಿಎಸ್‌ವೈ ಘೋಷಿಸಿದ್ದಾರೆ.
ಬೆಂಗಳೂರು (ಜ. 11): ಅಂತೂ ಇಂತೂ ಸಂಪುಟ ವಿಸ್ತರಣೆ ಕಗ್ಗಂಟು ಬಗೆಹರಿದಿದೆ. ಸಂಕ್ರಾಂತಿಗೂ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಸಿಹಿ ಸಿಗಲಿದೆ. ಜನವರಿ 13 ರಂದು ಸಂಪುಟ ವಿಸ್ತರಣೆ ನಡೆಯಲಿದೆ ಎಂದು ದೆಹಲಿ ಭೇಟಿ ಬಳಿಕ ಸಿಎಂ ಬಿಎಸ್‌ವೈ ಘೋಷಿಸಿದ್ದಾರೆ.
ಸಿಎಂ ಸಂಪುಟ ಸೇರುವ ಅದೃಷ್ಟಶಾಲಿಗಳು ಯಾರು..? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ
ಸದ್ಯ ಖಾಲಿ ಇರುವ 7 ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಸಂಪುಟಕ್ಕೆ ಯಾವ ಶಾಸಕರು ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದಿದ್ದಾರೆ. ಎಂಟಿಬಿ ನಾಗರಾಜ್, ಆರ್ ಶಂಕರ್, ಮುನಿರತ್ನ, ಯೋಗೇಶ್ವರ್, ಉಮೇಶ್ ಕತ್ತಿ, ಯತ್ನಾಲ್, ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.