Panchanga: ಶುಕ್ರವಾರ, ಪಂಚಮಿ ತಿಥಿ, ಲಲಿತಾ ಸಹಸ್ರನಾಮ ಪಠಣದಿಂದ ವಿಶೇಷ ಫಲ
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಶುಕ್ರವಾರ.
ಓದುಗರೆಲ್ಲರಿಗಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ ಪಂಚಮಿ ಬಂದಿರುವುದು ಬಹಳ ಒಳ್ಳೆಯದು. ಲಲಿತಾ ಪರಮೇಶ್ವರಿಯ ಆರಾಧನೆಗೆ ಪ್ರಶಸ್ತವಾದ ಕಾಲ.