Panchanga: ವೃಷಭ ರಾಶಿಗೆ ಸೂರ್ಯನ ಪ್ರವೇಶ, ಸೂರ್ಯೋಪಾಸನೆಯಿಂದ ಆರೋಗ್ಯ ವೃದ್ಧಿ
ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ, ಇಂದು ಭಾನುವಾರ. ಸ್ವಾತಿ ನಕ್ಷತ್ರ ನರಸಿಂಹ ಸ್ವಾಮಿಯ ನಕ್ಷತ್ರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳನ್ನು ನೋಡೋಣ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ, ಇಂದು ಭಾನುವಾರ. ಸ್ವಾತಿ ನಕ್ಷತ್ರ ನರಸಿಂಹ ಸ್ವಾಮಿಯ ನಕ್ಷತ್ರ. ನಿನ್ನೆ ನರಸಿಂ ಜಯಂತಿ ಆಚರಿಸಿದೆವು, ಇಂದೂ ಕೂಡಾ ಆರಾಧನೆಗೆ ಪ್ರಶಸ್ತವಾದ ಕಾಲ. ಇಂದಿನ ಇನ್ನೊಂದು ವಿಶೇಷ ಅಂದ್ರೆ ಸೂರ್ಯ ವೃಷಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ವೃಷಭ ರಾಶಿ ಶತ್ರುವಿನ ಮನೆ. ಹಾಗಾಗಿ ಸೂರ್ಯನಿಗೆ ಬಲ ಕಡಿಮೆ ಇರುವುದು, ಸೂರ್ಯೋಪಾಸನೆ ಮಾಡಿಕೊಳ್ಳಬೇಕು.