Panchanga: ಮಾಘಮಾಸದ ಶ್ರೀ ಪಂಚಮಿ, ತಾಯಿ ಲಲಿತೆಗೆ ಪುಷ್ಪಾರ್ಚನೆ ಮಾಡಿದರೆ ದಿವ್ಯಫಲ
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಶನಿವಾರ. ಮಾಘ ಮಾಸದ ಪಂಚಮಿಯನ್ನು ಶ್ರೀ ಪಂಚಮಿ ಎನ್ನುತ್ತಾರೆ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಶನಿವಾರ. ಮಾಘ ಮಾಸದ ಪಂಚಮಿಯನ್ನು ಶ್ರೀ ಪಂಚಮಿ ಎನ್ನುತ್ತಾರೆ. ಲಲಿತಾ ಆರಾಧನೆ ಮಾಡುವುದರಿಂದ, ಲಕ್ಷ್ಮಿಯ ಅಷ್ಟೋತ್ತರಗಳನ್ನು ಹೇಳುತ್ತಾ ಪುಷ್ಪಾರ್ಚನೆ ಮಾಡಬೇಕು. ತಾಯಿ ಸಂಪನ್ನಳಾಗುತ್ತಾಳೆ. ಅನುಗ್ರಹಿಸುತ್ತಾಳೆ.