Panchanga: ಇಂದು ಪುರಿ ಜಗನ್ನಾಥ ರಥೋತ್ಸವ, ಹಿಂದಿದೆ ಮಹಾಭಾರತದ ಈ ಕತೆ

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಗ್ರೀಷ್ಮ ಋತು, ದ್ವಿತೀಯ ತಿಥಿ, ಪುಷ್ಯ ನಕ್ಷತ್ರ, ಇಂದು ಶುಕ್ರವಾರ. ಆಷಾಢ ಮಾಸದ ದ್ವಿತೀಯವನ್ನು ರಥಯಾತ್ರಾ ಎಂದು ಕರೆಯಲಾಗುತ್ತದೆ.

First Published Jul 1, 2022, 9:12 AM IST | Last Updated Jul 1, 2022, 9:12 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಗ್ರೀಷ್ಮ ಋತು, ದ್ವಿತೀಯ ತಿಥಿ, ಪುಷ್ಯ ನಕ್ಷತ್ರ, ಇಂದು ಶುಕ್ರವಾರ. ಆಷಾಢ ಮಾಸದ ದ್ವಿತೀಯವನ್ನು ರಥಯಾತ್ರಾ ಎಂದು ಕರೆಯಲಾಗುತ್ತದೆ. ಇಂದು ಪುರಿಯಲ್ಲಿ ವಿಶ್ವನಾಥನ ರಥೋತ್ಸವ ನಡೆಯುತ್ತದೆ. ಮಹಾಭಾರತದ ಅಂತ್ಯದಲ್ಲಿ ಕೃಷ್ಣನ ಅವತಾರ ಮುಗಿಯುತ್ತದೆ. ಕೃಷ್ಣನ ಹೃದಯ ಭಾಗ ನದಿಯಲ್ಲಿ ತೇಲಿಕೊಂಡು ಬಂದು ಪುರಿಯನ್ನು ಬಂದು ತಲುಪಿತು ಎಂಬ ನಂಬಿಕೆ ಇದೆ.