Asianet Suvarna News Asianet Suvarna News

ಸುಹಾಸ್‌ಗೆ ಬೆಳ್ಳಿ: ಲಾಳನಕೆರೆಯಲ್ಲಿ ಸಂಭ್ರಮಾಚರಣೆ

Sep 5, 2021, 1:58 PM IST

ಹಾಸನ(ಸೆ.05): ಪ್ಯಾರಲಿಂಪಿಕ್ಸ್‌ನಲ್ಲಿ ಬೆಳ್ಳಿಗೆದ್ದ ಹಾಸನದ ಹುಡುಗನ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಹಾಸನದ ಲಾಳನಕೆರೆಯಲ್ಲಿ ಸಂಭ್ರಮ ತುಂಬಿದ್ದು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಡಿಸಿ ಆಗಿರುವುದರ ಜೊತೆಗೆ ವಿಶ್ವಮಟ್ಟದಲ್ಲಿ ಕೀರ್ತಿ ತಂದ ಸುಹಾಸ್ ಅವರ ಗ್ರಾಮಸ್ಥರು ಈ ಸಂಭ್ರಮವನ್ನು ಆಚರಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿಕೊಂಡು, ದೇಶಕ್ಕೂ ಕೀರ್ತಿ ತಂದಿದ್ದಾರೆ.