Asianet Suvarna News Asianet Suvarna News

ಅಪ್ಪನ ಬಗ್ಗೆ ಮಗನಿಗೆ ಸುಳಿವು ಕೊಟ್ಟಿದ್ರಾ ವಿನಯ್ ಗುರೂಜಿ?

Jul 30, 2019, 2:40 PM IST

ಸಿದ್ಧಾರ್ಥ್ ಅವರ ನಾಪತ್ತೆ ಬಗ್ಗೆ ಎಸ್ ಎಂ ಕೃಷ್ಣ ಪತ್ನಿ ಪ್ರೇಮಾ ಕೃಷ್ಣ ವಿನಯ್ ಗುರೂಜಿಯವರನ್ನು ಸಂಪರ್ಕಿಸಿದ್ದಾರೆ. ಸಿದ್ಧಾರ್ಥ್ ಕಾಣಿಸುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ನನಗೆ ನೀರು ಮಾತ್ರ ಕಾಣಿಸುತ್ತದೆ ಎಂದು ವಿನಯ್ ಗುರೂಜಿ ಸೂಚ್ಯವಾಗಿ ಹೇಳಿದ್ದಾರೆ. ವ್ಯಾವಹಾರಿಕ ವಿಚಾರದ ಬಗ್ಗೆ ಚರ್ಚಿಸಲು ಭಾನುವಾರ ಸಿದ್ಧಾರ್ಥ್ ಪುತ್ರ ಅಮರ್ತ್ಯ ವಿನಯ್ ಗುರೂಜಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ತಂದೆಗೆ ಏನೋ ಒತ್ತಡವಿದೆ. ಗಮನಹರಿಸು. ತಕ್ಷಣವೇ ತಿರುಪತಿಗೆ ಹೋಗಿ ಬನ್ನಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.