Asianet Suvarna News Asianet Suvarna News

ಅಗಲಿದ ಮಾಲೀಕ : ದೇಶಾದ್ಯಂತ ಕೆಫೆ ಕಾಫಿ ಡೇ ಬಂದ್

Jul 31, 2019, 12:56 PM IST

ಬೆಂಗಳೂರು (ಜು.31): ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದ, ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಚಿಕ್ಕಮಗಳೂರಿನ ಕಾಫಿ ಕಂಪನ್ನು ವಿಶ್ವದಾದ್ಯಂತ ಪಸರಿಸಿದ ಸಿದ್ಧಾರ್ಥ ಸಾವಿಗೆ ಕಾಫಿ ಡೇ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ದೇಶಾದ್ಯಂತ ಇಂದು ಕಾಫಿ ಡೇ ಶಾಪ್‌ಗಳು ಮುಚ್ಚಲಾಗಿದೆ.