Asianet Suvarna News Asianet Suvarna News

ಲೋಕಸಭೆ ಸೋಲಿನ ಬಳಿಕ ಪ್ರತ್ಯೇಕ ಧರ್ಮ ಬಿಟ್ಟು ಒಂದಾದ ವೀರಶೈವ ಲಿಂಗಾಯತ ಲೀಡರ್ಸ್

ಲೋಕಸಭೆ ಸೋಲಿನ ಬಳಿಕ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು  ಒಂದಾಗಿದ್ದು,  ಸಮುದಾಯದ ಹಿತದೃಷ್ಟಿಯಿಂದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಂಗಳೂರು, [ಜೂ.20] : ಲೋಕಸಭೆ ಸೋಲಿನ ಬಳಿಕ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು  ಒಂದಾಗಿದ್ದು,  ಸಮುದಾಯದ ಹಿತದೃಷ್ಟಿಯಿಂದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವೀರಶೈವ ಲಿಂಗಾಯತ ಮುಖಂಡರ ಸಭೆ ಬಳಿಕ ನಿಯೋಗವೊಂದು ಸಿಎಂ ಭೇಟಿ ಮಾಡಿ, ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲೂ ವೀರಶೈವ ಲಿಂಗಾಯತ ಸಮುದಾಯ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸಿಎಂ ಮನವಿಗೆ ಮನವಿ ಸಲ್ಲಿಸಿತು. 

ಗೃಹ ಸಚಿವ ಎಂ.ಬಿ.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸಮುದಾಯದ ಮುಖಂಡರು ಇದ್ದರು. ಲಿಂಗಾಯತ ಧರ್ಮ ಹೊರಾಟ ಸಂದರ್ಭದಲ್ಲಿ ಭಿನ್ನ ನಿಲುವು ತಳೆದಿದ್ದ ಪಾಟೀಲ್‌ ಹಾಗೂ ಶಾಮನೂರು ಒಂದೇ ವೇದಿಕೆಗೆ ಬಂದು ಸಮುದಾಯದ ಅಭಿವೃದ್ಧಿಗಾಗಿ ಒಗ್ಗಟ್ಟು ತೋರಿದ್ದು ವಿಶೇಷವಾಗಿತ್ತು. 

Video Top Stories