Asianet Suvarna News Asianet Suvarna News

ರಾಕ್ಷಸ ಬಾಗ್ದಾದಿ ಫಿನಿಷ್ ಹೆಂಗಾದ?: ಹೆಲಿಕಾಪ್ಟರ್ ನೋಡಿಯೇ ದಂಗಾದ!

ಐಸಿಸ್ ಮುಖ್ಯಸ್ಥನ ಕೊನೆಯ ಕ್ಷಣದ ವಿಡಿಯೋ ಬಿಡುಗಡೆ| ಬಾಗ್ದಾದಿ ಅಡಗುತಾಣದ ಮೇಲಿನ ದಾಳಿಯ ವಿಡಿಯೋ ಬಿಡುಗಡೆ| ಬಾಗ್ದಾದಿ ಮತ್ತು ಆತನ ಸಹಚರರ ಕೊನೆಯ ಕ್ಷಣದ ಹೋರಾಟದ ದೃಶ್ಯ ಸೆರೆ| ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಐಸಿಸ್ ಮುಖ್ಯಸ್ಥ| ಕಂಪೌಂಡ್ ಹೊರಗಿದ್ದ ಎಲ್ಲ ಉಗ್ರರನ್ನೂ ಒಂದೇ ಹೊಡೆತಕ್ಕೆ ಉಡೀಸ್ ಮಾಡಿದ ಅಮೆರಿಕ ಸೇನೆ|

ವಾಷಿಂಗ್ಟನ್(ಅ.31): ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿ ಅಡಗುತಾಣದ ಮೇಲಿನ ದಾಳಿಯ ವಿಡಿಯೋವನ್ನು ಪೆಂಟಗನ್ ಬಿಡುಗಡೆ ಮಾಡಿದೆ. ಉತ್ತರ ಸಿರಿಯಾದ ಬಾಗ್ದಾದಿ ಅಡಗುತಾಣದ ಮೇಲೆ ಅಮೆರಿಕ-ಖುರ್ದಿಷ್ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್ ಮುಖ್ಯಸ್ಥಅಬುಲ್ ಬಕರ್ ಅಲ್ ಬಾಗ್ದಾದಿಯನ್ನು ಕೊನೆಗಾಣಿಸಲಾಗಿತ್ತು. ಇದೀಗ ಬಾಗ್ದಾದಿ ಹತ್ಯೆಯ ಕೊನೆಯ ಕ್ಷಣದ ವಿಡಿಯೋ ಬಿಡುಗಡೆ ಮಾಡಿರುವ ಪೆಂಟಗನ್, ದಾಳಿಯ ಸಂಪೂರ್ಣ ವಿವರವನ್ನು ಹೊರ ಹಾಕಿದೆ. ಕಪ್ಪು ಬಿಳುಪಿನ ಈ ವಿಡಿಯೋದಲ್ಲಿ ಬಾಗ್ದಾದಿ ಮತ್ತು ಆತನ ಸಹಚರರ ಕೊನೆಯ ಕ್ಷಣದ ಹೋರಾಟದ ದೃಶ್ಯ ಸೆರೆಯಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories