Asianet Suvarna News Asianet Suvarna News

ಪುಲಕೇಶಿನಗರದಲ್ಲಿ 2 ಕಟ್ಟಡ ಕುಸಿತ; 7 ಮಂದಿ ಸಿಲುಕಿರುವ ಶಂಕೆ

Jul 10, 2019, 10:33 AM IST

ಬೆಂಗಳೂರಿನಲ್ಲಿ ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದು ಭಾರೀ ಅನಾಹುತ ಸಂಭವಿಸಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಕ್ ಟೌನ್ ರಸ್ತೆಯಲ್ಲಿ 3 ಹಾಗೂ 4 ಅಂತಸ್ತಿನ ಕಟ್ಟಡ ಕುಸಿದು ದುರಂತ ಸಂಭವಿಸಿದೆ. ಒಂದು ಕಟ್ಟಡದಲ್ಲಿ 3, ಇನ್ನೊಂದು ಕಟ್ಟಡದಲ್ಲಿ 4 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 50 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

Video Top Stories