ಕಾಮುಕ ಮಾವ! ನೂರಾರು ಕನಸುಗಳನ್ನ ಕಟ್ಟಿಕೊಂಡು ಬಂದಿದ್ದ ಸೊಸೆ ಅದೇ ಮನೆಯಲ್ಲಿ ಬರ್ಬರವಾಗಿ ಕೊಲೆ!
ಅದು ರಾಯಚೂರು ತಾಲೂಕಿನ ಜುಲುಮಗೆರಾ ಅನ್ನೋ ಗ್ರಾಮ. ಇದೇ ಗ್ರಾಮದವನಾದ ಈ ರಾಮಲಿಂಗಯ್ಯ ಅಂದ್ರೆ ಇಡೀ ಊರಿನ ತುಂಬಾ ಚಿರಪರಿಚಿತ.. ಒಳ್ಳೆ ಹೆಸರು ಪಡೆದಿದ್ದ. ಆದ್ರೆ ಇವತತ್ತು ಈತ ಮಾಡಿರುವ ಕೆಲಸ ನೋಡಿ ಈತನ ಮುಖಕ್ಕೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.
ಅದು ಶ್ರೀಮಂತ ಕುಟುಂಬ. 16 ಎಕರೆ ಕೃಷಿ ಜಮೀನು. 8-10 ಎಮ್ಮೆಗಳು. 300 ಕುರಿ. ಇನ್ನೇನು ಬೇಕು. ಆ ಕುಟುಂಬದಲ್ಲಿದ್ದಿದ್ದು ಗಂಡ ಹೆಂಡತಿ ಮತ್ತು 6 ಮಕ್ಕಳು. ನಾಲಕ್ಕು ಮಕ್ಕಳಿಗೆ ಮದುವೆಯಾಗಿದ್ರೆ ಇನ್ನಿಬ್ಬರು ಮನೆಯಲ್ಲೇ ಇದ್ರು. ಆದ್ರೆ ಆವತ್ತೊಂದು ದಿನ ಅದೇ ಮನೆಗೆ ನೂರಾರು ಕನಸುಗಳನ್ನ ಕಟ್ಟಿಕೊಂಡು ಬಂದಿದ್ದ ಮೊದಲ ಸೊಸೆ ಅದೇ ಮನೆಯಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಳು.
ಇನ್ನೂ ಕೊಲೆ ಮಾಡಿದ್ದು ಯಾರು ಗೊತ್ತಾ? ಆ ಮನೆಯ ಯಜಮಾನನೇ. ಮಾವನೆ ಸೊಸೆಯ ಹೆಣ ಹಾಕಿದ್ದ. ಅಷ್ಟಕ್ಕೂ ತಂದೆಯಂತಿದ್ದ ಮಾವನೇ ಸೊಸೆಯನ್ನ ಕೊಂದಿದ್ದೇಕೆ? ಅಂಥಹ ತಪ್ಪು ಅವಳು ಮಾಡಿದ್ದಾದ್ರೂ ಏನು? ಮುದ್ದಿನ ಸೊಸೆಯ ದುರಂತ ಅಂತ್ಯದ ಕಥೆ ಇಲ್ಲಿದೆ ನೋಡಿ.