Asianet Suvarna News Asianet Suvarna News

ಕೂದಲಿಂದಲೇ ವಾಹನ ಎಳೆದ ಮಹಿಳೆ: ನಿಮ್‌ದ್ಯಾವ ಶಾಂಪೂ ಎಂದ ನೆಟ್ಟಿಗರು

Oct 13, 2021, 9:48 AM IST

ತನ್ನ ತಲೆಕೂದಲಿಗೆ ವಾಹನಗಳನ್ನು(Vehicle) ಕಟ್ಟಿ ಎಳೆಯೋ ಯುವತಿಯನ್ನು ನೋಡಿದರೆ ಯಾರೂ ಬೆಚ್ಚಿ ಬೀಳುತ್ತಾರೆ. ಯುವತಿಯ ಸಾಹಸ ನೋಡಿದರೆ ಯಾರೇ ಆದರೂ ದಂಗಾಗುತ್ತಾರೆ. ವಾಹನಕ್ಕೆ ತಲೆಕೂದಲನ್ನು ಕಟ್ಟಿ ವಾಹನವನ್ನು ಪೆಟ್ರೋಲ್ ಬಂಕ್‌ಗೆ ಎಳೆದು ತಂದ ಯುವತಿಯ ವಿಡಿಯೋ ಈಗ ಎಲ್ಲೆಡೆ ವೈರಲ್(Viral) ಆಗಿದೆ.

ಚಿನ್ನದಂಗಡಿಯಲ್ಲಿ ಕಳ್ಳ ದಂಪತಿ ಸಿಕ್ಕಿ ಬಿದ್ದಿದ್ದೇ ರೋಚಕ..!

ವಾಹನದಲ್ಲಿ ಇಂಧನ ಕಾಲಿಯಾದ ಕಾರಣ ಯುವತಿ ವಾಹನ ಕೂದಲ ಮೂಲಕ ಎಳೆದಿದ್ದಾಳೆ ಎಂದಿದ್ದಾರೆ. ಇನ್ನೂ ಕೆಲವರು ಹೀಗೆ ಇಂಧನ ಬೆಲೆ ಏರಿಕೆ ಆದರೆ ಮುಂದೊಂದು ದಿನ ಇದೇ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ ನೆಟ್ಟಿಗರು. ಇನ್ನೊಂದಷ್ಟು ಜನರು ಅರೆ ಇವಳ್ಯಾವ ಶಾಂಪೂ ಬಳಸ್ತಾಳೆ ಎಂದು ಹಾಸ್ಯ ಮಾಡಿದ್ದಾರೆ. ಅಂದಹಾಗೆ ಕೂದಲಿಂದ ವಾಹನ ಎಳೆಯೋದು ಅಷ್ಟು ಸುಲಭ ಏನಲ್ಲ. ಇದು ಅಪಾಯಕಾರಿಯೂ ಹೌದು