ಸೋಶಿಯಲ್ ಮೀಡಿಯಾ ಪ್ರಿಯರೇ ನಿಮಗೊಂದು ಸಂತಸದ ಸುದ್ದಿ..ಹೌದು ಹುಲಿಯಾ!
ಬೆಂಗಳೂರು[ಜ.13] ಮಹತ್ವದ ಬೆಳವವಣಿಗೆಯೊಂದರಲ್ಲಿ, ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂದು ತ್ರಿಪುರ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸದಂತೆ ಇನ್ನಾರನ್ನೂ ಬಂಧಿಸಬಾರದೆಂದು ಕೂಡಾ ಮುಖ್ಯ ನ್ಯಾಯಾಧೀಶ ಆಖಿಲ್ ಖುರೇಷಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದನೆಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತ ಅರಿಂದಮ್ ಭಟ್ಟಾಚಾರ್ಯನನ್ನು ಪೊಲೀಸರು ಬಂಧಿಸಿರುವ ಪ್ರಕರಣವನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾ. ಖುರೇಷಿ ಈ ಆದೇಶವನ್ನು ಪ್ರಕಟಿಸಿದರು.
ಅಪರಿಚಿತರೊಂದಿಗೆ ಚಾಟ್ ಮಾಡುವ ಮುನ್ನ ಈ ಸುದ್ದಿ ಓದಿ
ಪೌರತ್ವ ತಿದ್ದುಪಡಿ ಕಾಯ್ದೆ ಪರ ಬಿಜೆಪಿ ಹಮ್ಮಿಕೊಂಡಿದ್ದ ಅನ್‌ಲೈನ್ ಅಭಿಯಾನವನ್ನು ಟೀಕಿಸಿದ್ದ ಭಟ್ಟಾಚಾರ್ಯ, ಯಾವುದೇ ಕಾರಣಕ್ಕೂ ಬಿಜೆಪಿ ಹೇಳಿರುವ ನಂಬರ್‌ಗೆ ಕರೆ ಮಾಡಬೇಡಿ ಎಂದು ತನ್ನ ವಾಲ್‌ನಲ್ಲಿ ಬರೆದುಕೊಂಡಿದ್ದ.
ಸೊಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡೋದು, ಸರ್ಕಾರಿ ನೌಕರರು ಸೇರಿದಂತೆ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು, ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಕೋರ್ಟ್ ಆದೇಶದ ಬಳಿಕ ಪೊಲೀಸರು ಎಫ್‌ಐಆರ್‌ನಿಂದ ಐಪಿಸಿಯ ಸೆಕ್ಷನ್ 120(B) ಮತ್ತು 153(A) ತೆಗೆದು ಹಾಕಿದ್ದಾರೆ.