ಎರಡು ಮಕ್ಕಳ ತಾಯಿ, ಉಂಡೂ ಹೋದಳು, ಕೊಂಡೂ ಹೋದಳು! ಇದು ಅಂಕಲ್-ಆಂಟಿ ಎಸ್ಕೇಪ್ ಸ್ಟೋರಿ!

ಇಬ್ಬರದ್ದೂ ಒಂದೇ ಗ್ರಾಮ. ಒಂದೇ ದಿನ ಮಿಸ್ಸಿಂಗ್​​ ಆಗಿದ್ದಾರೆ. ನಮಗೆ ಯಾಕೋ ಸಂಥಿಂಗ್​​ ಮಿಸ್​​ ಹೊಡೆಯುತ್ತಿದೆ ಅನ್ನಿಸಿತು. ನಾವು ಇಬ್ಬರನ್ನೂ ಕರೆದು ಪ್ರಶ್ನೆ ಮಾಡಿದ್ವಿ ಆಗಲೇ ನೋಡಿ ಗೊತ್ತಾಗಿದ್ದು ಮಾಸಾಬಿ ಮತ್ತು ಬಸವರಾಜ ಇಬ್ಬರೂ ಒಟ್ಟಿಗೇ ಎಸ್ಕೇಪ್​​ ಆಗಿದ್ದಾರೆ ಅನ್ನೋದು ಗೊತ್ತಾಗಿದ್ದು

First Published Jan 8, 2025, 1:43 PM IST | Last Updated Jan 8, 2025, 1:43 PM IST

ಅವನು ಟ್ರಕ್​​ ಡ್ರೈವರ್​​. ಒಮ್ಮೆ ಮನೆ ಬಿಟ್ರೆ ವಾಪಸ್​​ ಆಗೋಕೆ ದಿನಗಳೆ ಬಾಕಾಗ್ತಿತ್ತು. ಇನ್ನೂ ಆತನ ಹೆಂಡತಿ ಇದ್ದ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಆವತ್ತು ಬಾಡಿಗೆ ಇದೆ ಅಂತ ತನ್ನ ಟ್ರಕ್​​ ತೆಗೆದುಕೊಂಡು ಹೋದ. ಆದರೆ ದಾರಿ ಮಧ್ಯದಲ್ಲೇ ಅವನಿಗೆ ಫೋನ್​ ಕಾಲ್​ ಬಂದಿತ್ತು. ನಿನ್ನ ಹೆಂಡತಿ ಮಕ್ಕಳು ಕಾಣುತ್ತಿಲ್ಲ ಅಂತ. ಕೆಲಸದ ಮೇಲಿದ್ದ ಗಂಡ ಓಡೋಡಿ ಬಂದ. ಎಲ್ಲಿ ಹುಡುಕಿದ್ರೂ ಅವಳ ಸುಳಿವಿಲ್ಲ. ವಿಧಿ ಇಲ್ಲದೆ ಪೊಲೀಸ್​​ ಠಾಣೆಗೆ ಹೋಗಿ ಮಿಸ್ಸಿಂಗ್​ ಕಂಪ್ಲೆಂಟ್​​ ದಾಖಲಿಸಿದ.

ಆದ್ರೆ ಕಂಪ್ಲೆಂಟ್​​ ಕೊಟ್ಟು ಹೊರ ಬರುವಾಗ್ಲೇ ಮತ್ತೊಬ್ಬ ಮಹಿಳೆ ನನ್ನ ಗಂಡ ಕಾಣುತ್ತಿಲ್ಲ ಅಂತ ದೂರು ದಾಖಲಿಸೋದಕ್ಕೆ ಬಂದಿದ್ಲು. ಹಾಗಾದ್ರೆ ಅವನ ಹೆಂಡತಿ. ಈಕೆಯ ಗಂಡನ ಜೊತೆ ಓಡಿ ಹೋದಳಾ? ಅಥವಾ ಅಲ್ಲಿ ಕಿಡ್​ನ್ಯಾಪ್​ ಆಗಿದ್ಯಾ? ಒಂದು ಅಂಕಲ್​ ಆಂಟಿ ಲವ್​​ ಸ್ಟೋರಿಯೇ ಇವತ್ತಿನ ಎಫ್​.ಐ.ಆರ್​​