Asianet Suvarna News Asianet Suvarna News

ದೇವೇಗೌಡ್ರ ವಿರುದ್ಧ ಸಿದ್ದು ನೇರ-ನೇರ ವಾಗ್ದಾಳಿಗೆ ಕುಮಾರಸ್ವಾಮಿ ಥಂಡಾ

Aug 23, 2019, 7:04 PM IST

ಬೆಂಗಳೂರು, [ಆ.23] ಮೈತ್ರಿ ಸರ್ಕಾರ ಪತನಕ್ಕೆ ನೀವು ಕಾರಣವೆಂದು ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಮೊದಲು ಸಿದ್ದರಾಮಯ್ಯ ವಿರುದ್ಧ ನೇರವಾಗಿ ದೇವೇಗೌಡ್ರು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ವಾಚಾಮಗೋಚರವಾಗಿ ನೇರ-ನೇರ ವಾಗ್ದಾಳಿ ನಡೆಸಿದ್ದು, ದೊಡ್ಡಗೌಡ್ರ ಕೆಲಸಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ಥಂಡಾ ಹೊಡೆದಿರುವ ಕುಮಾರಸ್ವಾಮಿ , ಸಿದ್ದುಗೆ ಹೇಗೆ ಟಾಂಗ್ ಕೊಡಬೇಕೆಂದು ಚಿಂತೆಗೀಡಾಗಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯಗೆ ತಿರುಗೇಟು ಕೊಡಲು ಚಾರ್ಜ್ ಶೀಟ್ ತಯಾರಿ ಮಾಡುಕೊಳ್ಳುತ್ತಿದ್ದಾರೆ.

Video Top Stories