Asianet Suvarna News Asianet Suvarna News

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ‘ನಾಪತ್ತೆ’!

Jul 3, 2019, 1:55 PM IST

ಬೆಂಗಳೂರು (ಜು.03): ಕೈಬರಹದಲ್ಲಿರುವ ರಾಜೀನಾಮೆ ಪತ್ರ ರವಾನಿಸಿ ಎರಡು ದಿನಗಳು ಕಳೆದರೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಇನ್ನೂ ಭೇಟಿಯಾಗಿಲ್ಲ.

ಅಮವಾಸ್ಯೆ ಮುಗಿಯತ್ತಿದ್ದಂತೆ ಬೆಂಗಳೂರಿನ ತಮ್ಮ ನಿವಾಸದಿಂದ ಹೊರಟ ರಮೇಶ್ ಜಾರಕಿಹೊಳಿ ರಹಸ್ಯ ಸ್ಥಳಕ್ಕೆ ತೆರಳಿರುವುದು ಕುತೂಹಲ ಹುಟ್ಟುಹಾಕಿದೆ. ರಮೇಶ್ ಮುಂದಿನ ಏನಾಗಿರಬಹುದು? ಎಂಬ ಬಗ್ಗೆ  ನಮ್ಮ ಪ್ರತಿನಿಧಿ ಗಿರೀಶ್ ಕವಚೂರು ಮಾಹಿತಿ ನೀಡಿದ್ದಾರೆ.

ಕಳೆದ ಸೋಮವಾರ ಸ್ಪೀಕರ್ ಕಚೇರಿಗೆ ತೆರಳಿ ವಿಜಯನಗರ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ, ಕೈಬರಹದಲ್ಲಿರುವ ರಾಜೀನಾಮೆ ಪತ್ರವನ್ನು ರವಾನಿಸಿದ್ದರು.