Asianet Suvarna News Asianet Suvarna News

‘ಮೋದಿ ಸರ್ಕಾರದ್ದು ಕಾಗೆ ಹಾರಿಸುವ ಬಜೆಟ್’

Jul 5, 2019, 6:38 PM IST

ಬೆಂಗಳೂರು (ಜು. 05): ನರೇಂದ್ರ ಮೋದಿ ನೇತೃತ್ವದ ಎರಡನೇ ಸರ್ಕಾರದ ಮೊದಲ ಬಜೆಟ್‌ ಮೇಲೆ ಕರ್ನಾಟಕ ಜನತೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು, ಆದರೆ ಅವುಗಳೆಲ್ಲಾ ಹುಸಿಯಾಗಿವೆ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ. 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಶ್ರೀಸಾಮಾನ್ಯನಿಗೆ ಸುಂಕದ ಹೊರೆ ಹಾಕಿದೆ, ಇದೊಂದು ಜನ-ವಿರೋಧಿ ಮತ್ತು ರೈತ-ವಿರೋಧಿ ಬಜೆಟ್, ಕರ್ನಾಟಕಕ್ಕೆ ಏನೂ ಕೊಡದೇ ನಿರಾಸೆ ಮಾಡಿದೆ ಎಂದು ಹೇಳಿದರು.  

ಮೋದಿ ಸರ್ಕಾರ ಶ್ರೀಸಾಮಾನ್ಯರಿಗೆ ಮತ್ತೆ ಆಕಾಶ ತೊರಿಸುವ ಕೆಲಸ ಮಾಡಿದೆ. ಬರೀ ಕಾಗೆ ಹಾರಿಸುವ ಬಜೆಟ್ ಇದಾಗಿದೆ ಎಂದು ನೂತನ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.