ಪರಿಹಾರ ನಿಧಿಗೆ ರಿಲಯನ್ಸ್‌ನಿಂದ 5 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಮೊತ್ತ
ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ರಿಲಯನ್ಸ್ ಕಂಪನಿಯು 5 ಕೋಟಿ ರೂ.ಗಳ ದೇಣಿಗೆಯ ಚೆಕ್ ನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿತು. ಸಚಿವ ಜಗದೀಶ್ ಶೆಟ್ಟರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ರಿಲಯನ್ಸ್ ಕಂಪನಿಯ ಉಪಾಧ್ಯಕ್ಷ ಜಿಮ್ಮಿ ಅಂಬ್ರೋಲಿಯ ಉಪಸ್ಥಿತರಿದ್ದರು. ಇನ್ನೊಂದು ಕಡೆ ನೆರೆ ಸಂತ್ರಸ್ತರ ನೆರವಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಂಗ್ರಹವಾದ 50.76ಲಕ್ಷ ರೂ. ಮೊತ್ತದ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿ. ಪಂ. ಉಪಾಧ್ಯಕ್ಷರಾದ ನಿರ್ಮಲ ಮುನಿರಾಜು, ಸಿಇಓ ಬಿ. ಫೌಜಿಯಾ ತರನ್ನುಮ್ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.