Asianet Suvarna News Asianet Suvarna News

ಆಟವಾಡುತ್ತಿದ್ದ ಕೋತಿಯ ಮೇಲೆ ಬಿತ್ತು ಕಬ್ಬಿಣದ ಗೇಟ್

Sep 16, 2021, 9:31 AM IST

ಎರಡು ಕೋತಿ ಮರಿಗಳು ಖುಷಿಯಾಗಿ ಆಟವಾಡುತ್ತಿದ್ದವು. ಎರಡೂ ಕೋತಿಗಳು ಖುಷಿ ಖುಷಿಯಾಗಿ ಆಟವಾಡುತ್ತಿದ್ದವು. ಆದರೆ ಅಚಾನಕ್ ಆಗಿ ಕಬ್ಬಿಣದ ಗೇಟ್ ಒಂದು ಕೋತಿಗಳ ಮೇಲೆ ಬಿದ್ದಿದೆ. ಒಂದು ಕೋತಿ ತಪ್ಪಿಸಿಕೊಂಡರೂ ಇನ್ನೊಂದು ಕೋತಿ ಸಣ್ಣ ಕೋತಿಯ ಮೇಲೆ ಬಿದ್ದಿದೆ. ಗೇಟ್ ಕೆಳಗೆ ಸಿಕ್ಕಿ ಹಾಕಿಕೊಂಡ ಕೋತಿಯನ್ನು ರಕ್ಷಿಸಲು ಇನ್ನೊಂದು ಕೋತಿ ಪರದಾಡುತ್ತಿತ್ತು.

ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿ, ಎದುರಿಗಿದ್ದ ಪಾದಚಾರಿ ಕತೆ ಏನಾಯ್ತು ಅಂದ್ರೆ.!?

ಮರಿ ಕೋತಿ ಗೇಟ್ ಕೆಳಗೆ ವಿಲ ವಿಲನೆ ಒದ್ದಾಡೋ ವಿಡಿಯೋ ಮನಕಲಕುವಂತಿದೆ. ಛಲಬಿಡದೆ ಮರಿಕೋತಿಯನ್ನು ರಕ್ಷಿಸೋಕೆ ಏನೇನೋ ಪ್ರಯತ್ನ ಮಾಡಿದೆ. ಆದರೆ ನಂತರ ವ್ಯಕ್ತಿಯೊಬ್ಬರು ಸ್ವಲ್ಪ ಗೇಟ್ ಎತ್ತಿಕೊಟ್ಟಿದ್ದು ತಾಯಿ ಮರಿ ಕೋತಿಯನ್ನು ಎತ್ತಿಕೊಂಡಿದೆ.