Asianet Suvarna News Asianet Suvarna News

IMA ಪಂಗನಾಮ: ಅಮಾನತು ಬೆನ್ನಲ್ಲೇ ರೋಷನ್ ಬೇಗ್‌ಗೆ ಮತ್ತೊಂದು ಟ್ರಬಲ್!

ಪಕ್ಷವಿರೋಧಿ ಚಟುವಟಿಕೆಗೆಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅಮಾನತ್ತಾಗಿರುವ ಪಕ್ಷದ ಹಿರಿಯ ನಾಯಕ, ಶಿವಾಜಿನಗರ ಶಾಸಕ ರೋಷನ್ ಬೇಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  

ಬೆಂಗಳೂರು (ಜೂ.19): ಪಕ್ಷವಿರೋಧಿ ಚಟುವಟಿಕೆಗೆಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅಮಾನತ್ತಾಗಿರುವ ಪಕ್ಷದ ಹಿರಿಯ ನಾಯಕ, ಶಿವಾಜಿನಗರ ಶಾಸಕ ರೋಷನ್ ಬೇಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  

ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಮಂಗಮಾಯವಾಗಿರುವ IMA ಸಂಸ್ಥೆಯು, ದತ್ತು ಪಡೆದಿದ್ದ ಶಾಲೆಯ ವಿದ್ಯಾರ್ಥಿಗಳ ಪೋಷಕರು ರೋಷನ್ ಬೇಗ್ ವಿರುದ್ಧ ಸಿಡಿದೆದ್ದಿದ್ದಾರೆ. ರೋಷನ್ ಬೇಗ್ ನಿವಾಸದ ಹೊರಗೆ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದರು. ನಮ್ಮ ಪ್ರತಿನಿಧಿ ಗಿರೀಶ್ ಕವಚೂರ್ ಪ್ರತಿಭಟನೆಯ ಹಿಂದಿನ ಕಾರಣವನ್ನು  ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.

ಹಲಾಲ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ಮುಸ್ಲಿಮರಿಂದ ಕೋಟ್ಯಾಂತರ ರೂ. ಬಂಡವಾಳ ಸಂಗ್ರಹಿಸಿ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾನೆ. ಮಸೀದಿ-ಮದ್ರಸಗಳಿಗೆ ಡೊನೇಶನ್ ನೀಡಿ,  ಸರ್ಕಾರಿ ಶಾಲೆಗಳ ದತ್ತು ಪಡೆಯುವ ಮೂಲಕ IMA ಸಂಸ್ಥೆಯು ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತ್ತು.