ಪರಪ್ಪನ ಅಗ್ರಹಾರದ ಕರ್ಮಕಾಂಡ: ಮುರುಗನ್ ತಂಡದ ವರದಿಯಲ್ಲಿ ಏನಿದೆ?
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದ್ದು, ಅಧಿಕಾರಿಗಳಿಗೆ ದುಡ್ಡು ಕೊಟ್ಟು ಜೈಲಿನಲ್ಲಿ ಕೈದಿಗಳು ಬಿಂದಾಸ್ ಲೈಫ್ ನಡೆಸುತ್ತಿದ್ದಾರೆ.
ಜೈಲಿನಲ್ಲಿನ ಅಕ್ರಮಗಳ ಬಗ್ಗೆ ಸುವರ್ಣ್ ನ್ಯೂಸ್ ಸರಣಿ ವರದಿ ಮಾಡಿದ್ದು, ಗೃಹ ಸಚಿವರು ಅಲರ್ಟ್ ಆಗಿದ್ದಾರೆ.
ಐಜಿಪಿ ಮುರುಗನ್ ನೇತೃತ್ವದಲ್ಲಿ ಜೈಲಿನ ತನಿಖೆಗೆ ಆದೇಶ ನೀಡಲಾಗಿದ್ದು, ಗೃಹ ಇಲಾಖೆಗೆ ತನಿಖೆ ನಡೆಸಿ ಐಜಿಪಿ ಮುರುಗನ್ ವರದಿ ಕೊಟ್ಟಿದ್ದಾರೆ. ವರದಿಯಲ್ಲಿ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ , ಜೈಲಿನ ನ್ಯೂನತೆಯನ್ನು ಉಲ್ಲೇಖ ಮಾಡಲಾಗಿದೆ. ತನಿಖಾ ತಂಡವು ಜೈಲಿನಲ್ಲಿ ಮಾಡಬೇಕಾದ ಬದಲಾವಣೆ ಬಗ್ಗೆ ಸಲಹೆ ಕೊಟ್ಟಿದೆ. ಸುವರ್ಣ್ ನ್ಯೂಸ್'ಗೆ ತನಿಖಾ ವರದಿಯ ಎಕ್ಸ್‌ಕ್ಲ್ಯೂಸಿವ್ ಪ್ರತಿ ಲಭ್ಯವಾಗಿದ್ದು, ಅಕ್ರಮದಲ್ಲಿ ಅಧಿಕಾರಿಗಳೇ ಭಾಗಿಯಾಗಿದ್ದಾರೆ, ಭ್ರಷ್ಟಾಚಾರ ನಿಯಂತ್ರಣ ವಿಫಲವಾಗಿದ್ದು,ಅಧಿಕಾರಿಗಳ ಕಚೇರಿಯೇ ಅತ್ಯಂತ ಕಳಪೆ ಸ್ಥಿತಿಯಲ್ಲಿ ಇದೆ ಎಂದು ವರದಿ ಹೇಳಿದೆ.
ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಭದ್ರಾ ಮೇಲ್ದಂಡೆ ಘೋಷಣೆಗೆ ಕೇಂದ್ರ ಸಂಪುಟ ಅನುಮೋದನೆ ಬಾಕಿ -ಸಿಎಂ