ಡಿಕೆಶಿ ಅಮ್ಮನ ಕಾಲಿಗೆ ಬಿದ್ದ ಎಚ್‌ಡಿಕೆ; ಗಳಗಳನೇ ಅತ್ತ ಗೌರಮ್ಮ

ಜಾರಿ ನಿರ್ದೇಶನಾಲಯ (ED) ವಶದಲ್ಲಿರುವ  ಡಿ.ಕೆ.ಶಿವಕುಮಾರ್ ರ ಅಮ್ಮನ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಎಚ್ ಡಿಕೆ ಕಂಡು ಗೌರಮ್ಮ ಬಿಕ್ಕಿ ಬಿಕ್ಕಿ ಅತ್ತರು.

First Published Sep 6, 2019, 6:23 PM IST | Last Updated Sep 6, 2019, 6:23 PM IST

ರಾಮನಗರ (ಸೆ. 06): ಜಾರಿ ನಿರ್ದೇಶನಾಲಯ (ED) ವಶದಲ್ಲಿರುವ  ಡಿ.ಕೆ.ಶಿವಕುಮಾರ್ ರ ಅಮ್ಮನ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಎಚ್ ಡಿಕೆ ಕಂಡು ಗೌರಮ್ಮ ಬಿಕ್ಕಿ ಬಿಕ್ಕಿ ಅತ್ತರು.

ಗೌರಮ್ಮರಿಗೆ ಸಾಂತ್ವನ ನೀಡಿದ ಎಚ್ ಡಿಕೆ ಬಳಿಕ ಪತ್ರಕರ್ತರೊಡನೆ ಮಾತನಾಡಿದರು. ED,IT ಅಧಿಕಾರಿಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದೆ. ಈ ಪ್ರಕರಣ ಖಂಡನೀಯ. ಅವರನ್ನು ಕಸ್ಟಡಿಗೆ ತಗೆದುಕೊಂಡು ತನಿಖೆ ಮಾಡುವ ಅವಶ್ಯಕತೆ ಇರಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳಿ ಅದನ್ನೇ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಡಿಕೆಶಿ ಪ್ರಕರಣ - ವಿಚಾರಣೆ - ಬಂಧನ - ಪ್ರತಿಭಟನೆ... ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ....