Asianet Suvarna News Asianet Suvarna News

ಆಪರೇಷನ್ ಕಮಲ: ಬಿಜೆಪಿಗೆ ಸಚಿವ ಜಿಟಿಡಿ ಕ್ಲೀನ್ ಚಿಟ್!

Jul 3, 2019, 2:35 PM IST

ಮೈಸೂರು (ಜು.03): ಮೈತ್ರಿಸರ್ಕಾರದ ಇಬ್ಬರು ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ ಬಿಜೆಪಿಗೆ ಕ್ಲೀನ್ ಚಿಟ್ ನೀಡಿದರು.

ಮೈಸೂರಿನಲ್ಲಿಂದು ಪತ್ರಕರ್ತರೊಡನೆ ಮಾತನಾಡಿದ ಜಿಟಿಡಿ, ನಿನ್ನೆಯ ಹೇಳಿಕೆಯನ್ನು ಸಮರ್ಥಿಸಿಕೊಂಡರಲ್ಲದೇ, ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಆಪರೇಷನ್ ನಡೆಯುತ್ತಿಲ್ಲ ಎಂದು ಹೇಳಿದರು.

ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ಹಾಗೂ ರಮೇಶ್ ಜಾರಕಿಹೊಳಿ ಬಂಡಾಯದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಸರ್ಕಾರದೊಂದಿಗೆ ಭಿನ್ನಮತ ಹೊಂದಿರುವ ಆನಂದ್ ಸಿಂಗ್ ಕಳೆದ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೋರ್ವ ಬಂಡಾಯ ಶಾಸಕ ಗೋಕಾಕ್‌ನ ರಮೇಶ್ ಜಾರಕಿಹೊಳಿ ಸ್ಪೀಕರ್‌ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

Video Top Stories