Asianet Suvarna News Asianet Suvarna News

ನ.07ಕ್ಕೆ ಸರ್ಕಾರ ಆಗ್ದಿದ್ರೆ ರಾಷ್ಟ್ರಪತಿ ಆಡಳಿತ: ಅನಿವಾರ್ಯ ಎಂದ ರಾಜ್ಯಪಾಲ!

ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ| ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಎಚ್ಚರಿಕೆ| ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ 8 ದಿನಗಳು ಕಳೆದಿವೆ| ಇನ್ನುಳಿದ 7 ದಿನಗಳೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ| ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟ|ರಾಷ್ಟ್ರಪತಿ ಆಡಳಿತ ಜಾರಿ ಅನಿವಾರ್ಯ ಎಂದ  ರಾಜ್ಯಪಾಲ|

ಮುಂಬೈ(ನ.02): ನವೆಂಬರ್ 7 ರೊಳಗೆ ಸರ್ಕಾರ ರಚನೆಯಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಎಚ್ಚರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದ್ದು,ಕೂಡಲೇ ಸರ್ಕಾರ ರಚನೆಗೆ ಎರಡೂ ಪಕ್ಷಗಳು ಮುಂದಾಗಬೇಕು ಎಂದು ಸುಧೀರ್ ಮನವಿ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾಗಿ 8 ದಿನಗಳು ಕಳೆದಿದ್ದು, ಇನ್ನುಳಿದ  7 ದಿನಗಳೊಳಗೆ ಅಂದರೆ ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಸುಧೀರ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಕೂಡ ಮಾತನಾಡಿದ್ದು, ನ.07ರ ನಂತರ ರಾಷ್ಟ್ರಪತಿ ಜಾರಿಗೆ ಆದೇಶ ನೀಡುವುದು ಅನಿವಾರ್ಯ ಎಂದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..