Asianet Suvarna News Asianet Suvarna News

ಕಣ್ಣೀರಿಟ್ಟ ಜನರ ಕಣ್ಣೀರೊರೆಸಲು ಒಂದಾದ ನಿಮಗೆ 'ಸುವರ್ಣ' ಧನ್ಯವಾದ

ಕರ್ನಾಟಕದ 17 ಜಿಲ್ಲೆಗಳು ವರುಣನ ಅಬ್ಬರಕ್ಕೆ ತತ್ತರಿಸಿದ್ದು, ಸಾವಿರಾರು ಮಂದಿ ತಮ್ಮ ಮನೆ, ಜಾನುವಾರುಗಳನ್ನು ಕಳೆದು ಉಟ್ಟ ಉಡುಗೆಯಲ್ಲೇ ಪರಿಹಾರ ಕೇಂದ್ರದತ್ತ ಹೆಜ್ಜೆ ಹಾಕಿದ್ದಾರೆ. ಪ್ರವಾಹಕ್ಕೆ ಕೊಚ್ಚಿ ಹೋದ ಬದುಕನ್ನು ಹೇಗೆ ಕಟ್ಟಿಕೊಳ್ಳುವುದು ಎಮದು ತಿಳಿಯದೆ ಚಿಂತಿತರಾಗಿದ್ದಾರೆ. ಹೀಗೆ ಆಶ್ರಯ ಕಳೆದುಕೊಂಡ ಪ್ರವಾಹ ಪೀಡಿತ ಪ್ರದೆಶದ ಸಂತ್ರಸ್ತರಿಗೆ ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನ ಆರಂಭಿಸಿತ್ತು. ನಮ್ಮ ಈ ಒಂದು ಕರೆಗೆ ಸಾವಿರಾರು ಸಹೃದಯಿಗಳು ಸಂತ್ರಸ್ತರಿಗಾಗಿ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ನೆರೆಯಿಂದ ಕಂಗಾಲಾದ ಮಂದಿಯ ಕಣ್ಣೀರೊರೆಸಲು ನಾವಿದ್ದೇವೆ, ಚಿಂತಿಸಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ. ಪ್ರೀತಿಯಿಂದ ನೀವು ಕೊಟ್ಟ ವಸ್ತುಗಳನ್ನು ಸಂತ್ರಸ್ತರಿಗೆ ನಾವು ತಲುಪಿಸಿದ್ದು, ನಿಮ್ಮ ಸಹೃದಯಕ್ಕೆ ಕೋಟಿ ಧನ್ಯವಾದಗಳು.

ಬೆಂಗಳೂರು[ಆ.12]: ಕರ್ನಾಟಕದ 17 ಜಿಲ್ಲೆಗಳು ವರುಣನ ಅಬ್ಬರಕ್ಕೆ ತತ್ತರಿಸಿದ್ದು, ಸಾವಿರಾರು ಮಂದಿ ತಮ್ಮ ಮನೆ, ಜಾನುವಾರುಗಳನ್ನು ಕಳೆದು ಉಟ್ಟ ಉಡುಗೆಯಲ್ಲೇ ಪರಿಹಾರ ಕೇಂದ್ರದತ್ತ ಹೆಜ್ಜೆ ಹಾಕಿದ್ದಾರೆ. ಪ್ರವಾಹಕ್ಕೆ ಕೊಚ್ಚಿ ಹೋದ ಬದುಕನ್ನು ಹೇಗೆ ಕಟ್ಟಿಕೊಳ್ಳುವುದು ಎಮದು ತಿಳಿಯದೆ ಚಿಂತಿತರಾಗಿದ್ದಾರೆ. ಹೀಗೆ ಆಶ್ರಯ ಕಳೆದುಕೊಂಡ ಪ್ರವಾಹ ಪೀಡಿತ ಪ್ರದೆಶದ ಸಂತ್ರಸ್ತರಿಗೆ ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನ ಆರಂಭಿಸಿತ್ತು. ನಮ್ಮ ಈ ಒಂದು ಕರೆಗೆ ಸಾವಿರಾರು ಸಹೃದಯಿಗಳು ಸಂತ್ರಸ್ತರಿಗಾಗಿ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ನೆರೆಯಿಂದ ಕಂಗಾಲಾದ ಮಂದಿಯ ಕಣ್ಣೀರೊರೆಸಲು ನಾವಿದ್ದೇವೆ, ಚಿಂತಿಸಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ. ಪ್ರೀತಿಯಿಂದ ನೀವು ಕೊಟ್ಟ ವಸ್ತುಗಳನ್ನು ಸಂತ್ರಸ್ತರಿಗೆ ನಾವು ತಲುಪಿಸಿದ್ದು, ನಿಮ್ಮ ಸಹೃದಯಕ್ಕೆ ಕೋಟಿ ಧನ್ಯವಾದಗಳು.

Video Top Stories