Asianet Suvarna News Asianet Suvarna News

ಮನೆಯಲ್ಲೇ ಹಾಟ್‌ಲೈನ್: ವಿಚಾರಣೆಗೆ ಅಲೋಕ್ ಕುಮಾರ್‌ಗಿಲ್ಲ ಲೈಫ್‌ಲೈನ್!

Sep 27, 2019, 12:57 PM IST

ಬೆಂಗಳೂರು(ಸೆ.27): ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐನಿಂದ ವಿಚಾರಣೆಗೊಳಪಟ್ಟಿರುವ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಲವು ಸಂಗತಿಗಳನ್ನು ಸಿಬಿಐ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಲೋಕ್ ಕುಮಾರ್ ತಮ್ಮ ಮನೆಯಲ್ಲೇ ಹಾಟ್‌ಲೈನ್ ಇಟ್ಟುಕೊಂಡು ಹಲವು ಗಣ್ಯರ ಫೋನ್ ಟ್ಯಾಪ್ ಮಾಡುತ್ತಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರನ್ನು ಸಿಬಿಐ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಟ್ಯಾಪಿಂಗ್'ನಲ್ಲಿ ತನ್ನ ಸ್ವಂತ ಹಿತಾಸಕ್ತಿ ಏನಿಲ್ಲ ಎಂದು ಸಿಬಿಐ ಅಧಿಕಾರಿಗಳ ಮುಂದೆ ಹೇಳಿರುವ ಅಲೋಕ್ ಕುಮಾರ್, ಕೈಕೆಳಗಿನ ಅಧಿಕಾರಿಗಳನ್ನು ನಂಬಿ ಸಂಕಷ್ಟಕ್ಕೆ ಸಿಲುಕಿದ್ದಾಗಿ ಅಳಲಲು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories