Asianet Suvarna News Asianet Suvarna News

ತೇಜ್‌ಗಾಂ ಎಕ್ಸಪ್ರೆಸ್ ರೈಲಿಗೆ ಬೆಂಕಿ: 65 ಪ್ರಯಾಣಿಕರ ದರ್ಮರಣ!

ಕರಾಚಿ-ರಾವಲ್ಪಿಂಡಿ ತೇಜ್‌ಗಾಂ ಎಕ್ಸ್ ಪ್ರೆಸ್ ರೈಲು ಹೊತ್ತಿ ಹುರಿದಿದ್ದು ಈ ಅಗ್ನಿ ಅವಘಡದಲ್ಲಿ 65 ಪ್ರಯಾಣಿಕರು ಮೃತಪಟ್ಟಿದ್ದಾರೆ. 

ಕರಾಚಿ(ಅ.31): ಕರಾಚಿ-ರಾವಲ್ಪಿಂಡಿ ತೇಜ್‌ಗಾಂ ಎಕ್ಸ್ ಪ್ರೆಸ್ ರೈಲು ಹೊತ್ತಿ ಹುರಿದಿದ್ದು ಈ ಅಗ್ನಿ ಅವಘಡದಲ್ಲಿ 65 ಪ್ರಯಾಣಿಕರು ಮೃತಪಟ್ಟಿದ್ದಾರೆ. ಪಾಕಿಸ್ತಾನದ ಲಿಯಾಖತ್ ಪುರದಲ್ಲಿ ಈ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ 65 ಜನರು ಸಜೀವದಹನವಾಗಿದ್ದಾರೆ. ಇನ್ನು 13ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories