ಬಿಸಿಲ ಬೇಗೆಗೆ ಕರಗಿ ಹೋಗ್ತಿದೆ ಬೆಣ್ಣೆನಗರಿ: ದಾಣಗೆರೆಯ 163 ಹಳ್ಳಿಗಳಲ್ಲಿ ಜಲಕ್ಷಾಮ

ಈ ಬಾರಿಯ ಬೇಸಿಗೆ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಗಂಭೀರ ಅಭಾವ ಸೃಷ್ಠಿಸಿದೆ. ಜಿಲ್ಲೆಯ 163 ಹಳ್ಳಿಗಳು ತೀವ್ರ ಜಲಕ್ಷಾಮದಿಂದ ತತ್ತರಿಸಿವೆ.

First Published Apr 30, 2019, 3:54 PM IST | Last Updated Apr 30, 2019, 3:54 PM IST

ದಾವಣಗೆರೆ[ಏ.30]: ಈ ಬಾರಿಯ ಬೇಸಿಗೆ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಗಂಭೀರ ಅಭಾವ ಸೃಷ್ಠಿಸಿದೆ. ಜಿಲ್ಲೆಯ 163 ಹಳ್ಳಿಗಳು ತೀವ್ರ ಜಲಕ್ಷಾಮದಿಂದ ತತ್ತರಿಸಿವೆ. ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ, ಮಾಯಕೊಂಡ ಹೋಬಳಿ, ರಾಂಪುರ, ಬೋರಗೊಂಡನಹಳ್ಳಿಯಲ್ಲಿ  ನೀರಿಗೆ ಹಾಹಾಕಾರ ತಲೆದೂರಿದೆ. ನೀರಿನ ಸಮಸ್ಯೆ ಮುಂದಿಟ್ಟು ಮತದಾನ ಬಹಿಷ್ಕರಿಸಿದ್ದ 6 ಹಳ್ಳಿಗಳಲ್ಲಿ ಅಧಿಕಾರಿಗಳು ಸಮಾಧಾನ ಪಡಿಸಿ ಮತದಾನ ಮಾಡಿಸಿದ್ರು. 163 ಹಳ್ಳಿಗಳಲ್ಲೂ ನೀರಿನ ಅಭಾವವಿದ್ದು 43 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ 61 ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಆದರೆ ಜಿಲ್ಲಾಢಳಿತದ  ಲೆಕ್ಕಕ್ಕೆ ಸಿಗದ ಅದೆಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕೂಗು ಅಧಿಕಾರಿಗಳ ಕಿವಿಗೆ ಬೀಳದಂತಾಗಿದೆ.  

Video Top Stories