ರಣ ಬಿಸಿಲಿಗೆ ಬೆಂಕಿಯುಂಡೆಯಾಗುತ್ತಿದೆ ಮುಳುಗಡೆ ನಗರಿ!
ಇತ್ತ ಬಾಗಲಕೋಟೆಯಂತು ದಿನದಿಂದ ದಿನಕ್ಕೆ ಬೆಂಕಿ ಉಂಡೆಯಾಗುತ್ತಿದೆ. ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಬಿಸಿಲ ತಾಪ ಶೇ. 43 ಡಿಗ್ರಿ ದಾಟಿದ್ದು ಬೆಳಿಗ್ಗೆ 11ರ ಸುಮಾರಿಗೆ ಜನರು ರಸ್ತೆಗೆ ಕಾಲಿಡದಂತಹಃ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗಲಕೋಟೆ[ಏ.30]: ಬಾಗಲಕೋಟೆಯಂತು ದಿನದಿಂದ ದಿನಕ್ಕೆ ಬೆಂಕಿ ಉಂಡೆಯಾಗುತ್ತಿದೆ. ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಬಿಸಿಲ ತಾಪ ಶೇ. 43 ಡಿಗ್ರಿ ದಾಟಿದ್ದು ಬೆಳಿಗ್ಗೆ 11ರ ಸುಮಾರಿಗೆ ಜನರು ರಸ್ತೆಗೆ ಕಾಲಿಡದಂತಹಃ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲ ತಾಪಮಾನದಿಂದ ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಜನತೆ ತಂಪು ಪಾನೀಯ ಹಾಗೂ ಮರ-ಗಿಡಗಳನ್ನು ಆಶ್ರಯಿಸಿದ್ದು, ಮಳೆರಾಯನ ಕೃಪೆಗಾಗಿ ಹಾತೊರೆಯುತ್ತಿದ್ದಾರೆ. ಜನ, ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವಂತಾಗಿದೆ.