Asianet Suvarna News Asianet Suvarna News

ಶಾಸಕರ ರಾಜೀನಾಮೆ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಗುಡ್ ಬೈ! ಹೈಕಮಾಂಡ್ ಗರಂ

Jul 2, 2019, 3:58 PM IST

ಬೆಂಗಳೂರು (ಜು. 02): ಆನಂದ್ ಸಿಂಗ್ ರಾಜೀನಾಮೆ ಮೈತ್ರಿ ಸರ್ಕಾರಕ್ಕೆ ತಲೆನೋವು ತಂದಿದೆ. ಅದರ ಬೆನ್ನಲ್ಲೇ ಗೋಕಾಕ್ ಶಾಸಕ ರಾಜೀನಾಮೆ ಪತ್ರ ರವಾನಿಸಿದ್ದಾರೆ.  ಅತ್ತ ಸಿಎಂ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಇತ್ತ KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ಬೈ ಬೈ ಎಂದು ಹೊರಟೇಬಿಟ್ಟಿದ್ದು, ಹೈಕಮಾಂಡ್ ನಾಯಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಹೌದು, ಈ ಬೆಳವಣಿಗೆಗಳ ನಡುವೆ ಅತೃಪ್ತ ಶಾಸಕರನ್ನು ಮಾತನಾಡಿಸೋದು ಬಿಟ್ಟು ದಿನೇಶ್ ಲಂಡನ್‌ಗೆ ಹೊರಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ KPCC ಅಧ್ಯಕ್ಷ ದಿನೇಶ್ ಗುಂಡೂ ರಾವ್ ವಿರುದ್ಧ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗರಂ ಆಗಿದ್ದಾರೆ.