ವಾರಕ್ಕೊಮ್ಮೆ ಸ್ನಾನ.. ತಿಂಗಳಿಗೊಮ್ಮೆ ಬಟ್ಟೆ ವಾಶ್!
ಈ ಬಾರಿಯ ಬೇಸಿಗೆ ಗಣಿನಾಡು ಬಳ್ಳಾರಿಯನ್ನು ಬೇಯಿಸುತ್ತಿದೆ. ಬೆಂಕಿಯುಂಡೆಯಂತಹ ಬಿಸಿಲ ತಾಪಕ್ಕೆ ಜಿಲ್ಲೆಯ ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಜನತೆ ಟ್ಯಾಂಕರ್ ನೀರಿಗಾಗಿ ಬಡಿದಾಡುವಂತಾಗಿದೆ. ಇನ್ನು ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಹರಗಿನಡೋಣಿ ಗ್ರಾಮಸ್ಥರು ನೀರಿನ ಅಭಾವದಿಂದ ಪೇಪರ್ ಪ್ಲೇಟ್ನಲ್ಲಿ ಊಟ ಮಾಡಿ, ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಿದ್ರು ಇವರ ಸಂಕಷ್ಟ ಮಾತ್ರ ಪರಿಹಾರವಾಗಿಲ್ಲ
ಬಳ್ಳಾರಿ[ಏ.30]: ಈ ಬಾರಿಯ ಬೇಸಿಗೆ ಗಣಿನಾಡು ಬಳ್ಳಾರಿಯನ್ನು ಬೇಯಿಸುತ್ತಿದೆ. ಬೆಂಕಿಯುಂಡೆಯಂತಹ ಬಿಸಿಲ ತಾಪಕ್ಕೆ ಜಿಲ್ಲೆಯ ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಜನತೆ ಟ್ಯಾಂಕರ್ ನೀರಿಗಾಗಿ ಬಡಿದಾಡುವಂತಾಗಿದೆ. ಇನ್ನು ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಹರಗಿನಡೋಣಿ ಗ್ರಾಮಸ್ಥರು ನೀರಿನ ಅಭಾವದಿಂದ ಪೇಪರ್ ಪ್ಲೇಟ್ನಲ್ಲಿ ಊಟ ಮಾಡಿ, ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಿದ್ರು ಇವರ ಸಂಕಷ್ಟ ಮಾತ್ರ ಪರಿಹಾರವಾಗಿಲ್ಲ