Asianet Suvarna News Asianet Suvarna News

ಅತೃಪ್ತ ಶಾಸಕರ ರಾಜೀನಾಮೆ; ಡಿಕೆಶಿ ಲೆಕ್ಕಾಚಾರವಿದು

Jul 6, 2019, 1:50 PM IST

ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಡಿಕೆಶಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಉಭಯ ಪಕ್ಷದಲ್ಲಿನ ಅತೃಪ್ತ ಶಾಸಕರನ್ನು ಸಮಾಧಾನಪಡಿಸಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು  ಪ್ರಯತ್ನ ಮಾಡುತ್ತೇವೆ. ಬಿಜೆಪಿಯವರು ತೆರೆಮರೆಯಲ್ಲಿ ಏನೆಲ್ಲ ಬೇಕೊ ಅದನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಶಾಸಕರನ್ನು ದನ ಕುರಿಗಳಂತೆ ಖರೀದಿ ಮಾಡಲು ಬಿಜೆಪಿಯ ಮಾಜಿ ಸಚಿವರು ಬೆಂಗಳೂರು ನಗರದ ಗುತ್ತಿಗೆದಾರರು ಹಾಗೂ ಡೆವಲಪರ್ಸ್ ಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಉರುಳಿಸಲು ಯಾರೆಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ, ನಮ್ಮ ಜನ ಹಾಗೂ ನಮ್ಮ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.