Asianet Suvarna News Asianet Suvarna News

ಸಿದ್ದು-ಗೌಡರ ಯುದ್ಧದಲ್ಲಿ ಡಿಕೆಶಿ ಸೈಲೆಂಟ್: ಇದರ ಹಿಂದಿದೆ ರಾಜಕೀಯ ಟ್ಯಾಲೆಂಟ್

Aug 25, 2019, 5:23 PM IST

ಬೆಂಗಳೂರು, (ಆ.25):  ರಾಜ್ಯ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ್ದಾಯ್ತು. ಇತ್ತ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ನಾಯಕರ ನಡುವೆ ಮಾತಿನ ಯುದ್ಧಗಳು ನಡೆಯುತ್ತಿವೆ. ಅದರಲ್ಲೂ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಸೇರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದು ಸಹ ಅಪ್ಪ, ಮಗನ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಇದಕ್ಕೆ ಕೆಲ ಕಾಂಗ್ರೆಸ್ ನಾಯಕರೂ ಸಹ ಅಲ್ಪ-ಸ್ವಲ್ಪ ಧ್ವನಿಗೂಡಿಸಿದ್ದಾರೆ. ಆದ್ರೆ ಡಿ.ಕೆ.ಶಿವಕುಮಾರ್ ಮಾತ್ರ ಈ ಆಟಕ್ಕಿಲ್ಲ ಎನ್ನುತ್ತಿದ್ದಾರೆ. ಸಿದ್ದು ಮತ್ತು ಗೌಡ ವಿರುದ್ಧ ಮಾತಿನ ಯುದ್ಧದಲ್ಲಿ ಡಿಕೆಶಿ ಸೈಲೆಂಟ್. ಇದರ ಹಿಂದಿದೆ ರಾಜಕೀಯ ಟ್ಯಾಲೆಂಟ್. ಅದನ್ನು  ವಿಡಿಯೋನಲ್ಲಿ ನೋಡಿ.