Asianet Suvarna News Asianet Suvarna News

‘ನಾವು ಸರ್ಕಾರ ಬೀಳಿಸೋಕೆ ಸಾಧ್ಯನೇ ಇಲ್ಲ’

ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ಹಿನ್ನೆಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ; ಸರ್ಕಾರ ಬೀಳೋದು ಖಚಿತ; ನಾವು ಆಪರೇಷನ್ ಮಾಡಲ್ಲ: ಬಿಜೆಪಿ ನಾಯಕರ ಪ್ರತಿಕ್ರಿಯೆ 

ಬೆಂಗಳೂರು (ಜು.01): ವಿಜಯನಗರ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೈತ್ರಿ ಸರ್ಕಾರ ಬೀಳೋದು ಖಚಿತ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.  

ಆನಂದ್ ಸಿಂಗ್ ರಾಜೀನಾಮೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಆರ್. ಆಶೋಕ್, ನಾವು ಸರ್ಕಾರ ಬೀಳಿಸೋಕೆ ಸಾಧ್ಯವಿಲ್ಲ, ನಾವು ಆಪರೇಷನ್ ಮಾಡಲ್ಲ, ಆದರೆ ಸರ್ಕಾರ ಬೀಳೋದು ಮಾತ್ರ ಖಚಿತ ಎಂದು ಹೇಳಿದರು.