Asianet Suvarna News Asianet Suvarna News

ಕುಮಾರಸ್ವಾಮಿಗೆ ಅಣ್ಣ-ಅಣ್ಣ ಎನ್ನುತ್ತಲೇ ಅತ್ತಿಗೆ ಸುತ್ತಲಿನವರ ಫೋನ್ ಟ್ಯಾಪ್

Sep 27, 2019, 5:11 PM IST

ಬೆಂಗಳೂರು, (ಸೆ.27): ಸಿಬಿಐ ತನಿಖೆ ವೇಳೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ  ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿವೆ. ಇದೀಗ ಅನಿತಾ ಕುಮಾರಸ್ವಾಮಿ ಅವರ ಆಪ್ತರ ಫೋನ್‌ಗಳನ್ನು ಟ್ಯಾಪ್ ಮಾಡಿಸಲಾಗಿದೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಣ್ಣ ಅಣ್ಣ ಅನ್ನುತ್ತಲೇ ಕುಮಾರಸ್ವಾಮಿ ಜತೆಗಿದ್ದ ಇಬ್ಬರು ಪರಮಾಪ್ತರಿಂದಲೇ ಅತ್ತಿಗೆ ಅನಿತಾ ಕುಮಾರಸ್ವಾಮಿ ಆಪ್ತರ  ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. ಅನಿತಾ ಕುಮಾರಸ್ವಾಮಿ ಜತೆಗಿದ್ದ ಆಪ್ತರ ಫೋನ್ ಕದ್ದಾಲಿಸಿರುವುದು ಕುಮಾರಸ್ವಾಮಿ ಪರಮಾಪ್ತರು ಎಂದು ತಿಳಿದುಬಂದಿದ್ದು, ಕದ್ದು ಕೇಳಿದ ಮಾಹಿತಿಯನ್ನು ಕುಮಾರಸ್ವಾಮಿಗೆ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಾಗಾದ್ರೆ ಅನಿತಾ ಕುಮಾರಸ್ವಾಮಿ ಆಪ್ತರ ಪೋನ್ ಕದ್ದಾಲಿಕೆ ಮಾಡಿಸಿದ್ಯಾಕೆ? ಕಾರಣವೇನು? ವಿಡಿಯೋನಲ್ಲಿ ನೋಡಿ.