Asianet Suvarna News Asianet Suvarna News

ಕೇಂದ್ರದ ಕಾಶ್ಮೀರ ಮಂತ್ರಕ್ಕೆ BJP ಕಟ್ಟಾ ವಿರೋಧಿ BSP ಬೆಂಬಲ!

Aug 5, 2019, 1:51 PM IST

ನವದೆಹಲಿ (ಆ.05): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದು ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.  ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಈ ಪ್ರಸ್ತಾವನೆಯಲ್ಲಿ ಮಂಡಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಕೇಂದ್ರದ ಈ ನಡೆಯನ್ನು ವಿರೋಧಿಸಿದೆ. ಆದರೆ ಇನ್ನಿತರ ರಾಜಕೀಯ ಪಕ್ಷಗಳು ಈ ಐತಿಹಾಸಿಕ ಕ್ರಮವನ್ನು ಸ್ವಾಗತಿಸಿವೆ.