Asianet Suvarna News Asianet Suvarna News

ಶಬರಿಮಲೆ ಯಾತ್ರಿಗಳಿಂದ ಲೂಟಿ ಮಾಡ್ತಿರೋ ಕೇರಳ ಪೊಲೀಸರು...!

ಕೊರೋನಾ ಹೆಸರಲ್ಲಿ ಹಣ ಲೂಟಿ| 5 ನಿಮಿಷದೊಳಗೆ ವರದಿ ನೀಡುತ್ತಿರುವ ಕೇರಳ ಪೊಲೀಸರು| ಪ್ರತಿಯೊಬ್ಬರಿಗೂ ನೆಗೆಟಿವ್ ಸೀಲ್| ಭಕ್ತಾಧಿಗಳಿಂದ ಹಣ ಪೀಕುವ ದಂಧೆ| 

ಕೇರಳ(ನ.22): ಕರ್ನಾಟಕದಿಂದ ಕೇರಳದ ಶಬರಿಮಲೆಗೆ ತೆರಳುತ್ತಿರುವ ಭಕ್ತಾಧಿಗಳಿಂದ ಕೊರೋನಾ ಹೆಸರಲ್ಲಿ ಹಣ ಲೂಟಿ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಸಾವಿರಾರು ರೂಪಾಯಿ ಹಣ ವೆಚ್ಚ ಮಾಡಿ ಕೋವಿಡ್ ಟೆಸ್ಟ್ ಮಾಡಿಸಿ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ರೂ ಕೇರಳ ಪೊಲೀಸರು ಮಾತ್ರ ಕೊರೋನಾ ಹೆಸರಲ್ಲಿ ಭಕ್ತಾಧಿಗಳಿಂದ ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಹಂಪಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌, ಜೋಡಿ ಮಾಡಿದ ಅವಾಂತರ ನೋಡಿ

ಬೆಂಗಳೂರಿನ ನೆಲಮಂಗಲದಿಂದ ಕೇರಳದ ಶಬರಿಮಲೆಗೆ ಹೊರಟಿದ್ದ ಮಾಲಾಧಾರಿಗಳು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ರಿಪೋರ್ಟ್ ಸಮೇತ ಶಬರಿಮಲೆಯಲ್ಲಿ ಇಳಿದಿದ್ದರು. ಆದರೆ, ಕೇರಳದ ಪೊಲೀಸರು ಮಾತ್ರ ಈ ರಿಪೋರ್ಟ್ ಆಗಲ್ಲ ಎಂದು ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಒದಗಿಸುತ್ತಿಲ್ಲ. ಕರ್ನಾಟಕದಿಂದ ತೆರಳುವ ಪ್ರತಿಯೊಬ್ಬ ಮಾಲಾಧಾರಿಯೂ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ ಕೇರಳದಲ್ಲಿ ಮಾತ್ರ ಈ ರಿಪೋರ್ಟ್‌ಗೆ ಯಾವುದೇ ಮೌಲ್ಯ ಇಲ್ಲದಂತಾಗಿದೆ. ಅಲ್ಲದೇ, ಈ ವರದಿಗೆ 625ರೂ. ಚಾರ್ಜ್ ಮಾಡುತ್ತಿದ್ದಾರೆ. 5 ನಿಮಿಷದೊಳಗೆ ವರದಿ, ಪ್ರತಿಯೊಬ್ಬರಿಗೂ ನೆಗೆಟಿವ್ ಸೀಲ್ ಹಾಕಿ ಕೊಡ್ತಿದ್ದು, ಭಕ್ತಾಧಿಗಳಿಂದ ಹಣ ಪೀಕುವ ದಂಧೆಯಿದು ಎಂದು ಆರೋಪಿಸಿದ್ದಾರೆ. 
 

Video Top Stories