Asianet Suvarna News Asianet Suvarna News

ಪರಿಶಿಷ್ಟ ಪಂಗಡ ಮೀಸಲಾತಿ ಕಿಚ್ಚಿಗೆ ಕಿಚ್ಚ ಎಂಟ್ರಿ

Jun 25, 2019, 5:02 PM IST

ಬೆಂಗಳೂರು, (ಜೂ.25): ಪರಿಶಿಷ್ಟ ಪಂಗಡಕ್ಕೆ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ಮಂಗಳವಾರ ಬೆಂಗಳೂರಿನಲ್ಲಿ ವಾಲ್ಮೀಕಿ ಸಮುದಾಯ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು.  ಇದಕ್ಕೆ ಶಾಸಕ ಶ್ರೀರಾಮುಲು, ಕಾಂಗ್ರೆಸ್​ ಮುಖಂಡ ಉಗ್ರಪ್ಪ, ನಾಗೇಂದ್ರ ಸೇರಿಂದಂತೆ ವಾಲ್ಮೀಕಿ ಸಮುದಾಯದ ರಾಜಕೀಯ ನಾಯಕರು ಬೆಂಬಲ ಸೂಚಿಸಿದರು.

ನಟ ಕಿಚ್ಚ ಸುದೀಪ್​ ಸಹ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.  ವಿದ್ಯಾರ್ಥಿಗಳ ಒಳಿತಿಗಾಗಿ ಸ್ವಾಮೀಜಿ ಅವರು ಪಾದಯಾತ್ರೆ ನಡೆಸುತ್ತಿದ್ದು, ಅವರ ಪರವಾಗಿ ತಾನಿದ್ದೇನೆ ಎಂದು ಕಿಚ್ಚ ಟ್ವೀಟ್​ ಮಾಡಿದ್ದಾರೆ.