ಉತ್ತರ ಪ್ರದೇಶದ ಆಗ್ರಾದಲ್ಲಿ ಎದೆ ನಡುಗಿಸೋ ಅಪಘಾತ! ವಿಡಿಯೋ ವೈರಲ್
ಅರಾಜಕತೆಯಿಂದ ಲಾರಿ ಡ್ರೈವ್ ಮಾಡಿದ ಲಾರಿ ಚಾಲಕನನ್ನು ಸವಾರರು ಹಾಗೂ ಅಲ್ಲಿನ ಸ್ಥಳೀಯರು ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗ್ರಾ: ಬೈಕ್‌ಗೆ ಡಿಕ್ಕಿ ಹೊಡೆದ ಲಾರಿಗೆ ಸಿಲುಕಿದ ಸವಾರರು. ಡಿಕ್ಕಿ ಹೊಡೆದರೂ ಲಾರಿ ಚಾಲಕ ಲಾರಿ ನಿಲ್ಲಿಸದೇ ಸುಮಾರು ಅರ್ಧ ಕಿಲೋಮೀಟರ್ ಲಾರಿ ಚಲಾಯಿಸಿದ್ದಾರೆ. ಬೈಕ್ ಸವಾರರು ಕಿರುಚಾಡಿದರೂ ಲಾರಿ ಚಾಲಕ ಮಾತ್ರ ಲಾರಿಯನ್ನು ನಿಲ್ಲಿಸಿಲ್ಲ. ಈ ವಿಡಿಯೋ ನೋಡಿದವರಿಗೆ ಎಂತಹವರಿಗಾದರೂ ಒಂದು ಕ್ಷಣ ಎದೆ ನಡಗುತ್ತದೆ.
ಇದಾದ ಬಳಿಕ ಅರಾಜಕತೆಯಿಂದ ಲಾರಿ ಡ್ರೈವ್ ಮಾಡಿದ ಲಾರಿ ಚಾಲಕನನ್ನು ಸವಾರರು ಹಾಗೂ ಅಲ್ಲಿನ ಸ್ಥಳೀಯರು ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.