ಫೈಟ್ ಮಾಡ್ತಾ ಮನೆಗೆ ನುಗ್ಗಿದ ಗೂಳಿ: ನಾಯಿ ಡಿಕ್ಕಿಗೆ ಮುಗ್ಗರಿಸಿ ಬಿದ್ದ ಯುವತಿ.. ವೈರಲ್ ವಿಡಿಯೋ

ಎರಡು ಗೂಳಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಒಂದು ಗೂಳಿ ಸೀದಾ ಹೋಗಿ ಮನೆಯೊಂದಕ್ಕೆ ನುಗ್ಗಿದೆ. ದೈತ್ಯಾಕಾರದ ಗೂಳಿ ಮನೆಗೆ ನುಗ್ಗಿದ ರಭಸಕ್ಕೆ ಮನೆ ಮಂದಿಯೆಲ್ಲಾ ದಿಕ್ಕಪಾಲಾಗಿ ಓಡಿದ್ದಾರೆ.

First Published Jul 7, 2022, 6:11 PM IST | Last Updated Jul 7, 2022, 6:11 PM IST

ಗೂಳಿಗಳಿಗೆ ಮದವೇರಿದರೆ ಎದುರಿಗೆ ಸಿಕ್ಕವರು ಧೂಳೀಪಟವಾಗುತ್ತಾರೆ. ಇನ್ನು ಎರಡು ಗೂಳಿಗಳು ಪರಸ್ಪರ ಹೊಡೆದಾಡಿಕೊಳ್ಳುವ ಅನೇಕ ದೃಶ್ಯಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಅದೇ ರೀತಿ ಎರಡು ಗೂಳಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಒಂದು ಗೂಳಿ ಸೀದಾ ಹೋಗಿ ಮನೆಯೊಂದಕ್ಕೆ ನುಗ್ಗಿದೆ. ದೈತ್ಯಾಕಾರದ ಗೂಳಿ ಮನೆಗೆ ನುಗ್ಗಿದ ರಭಸಕ್ಕೆ ಮನೆ ಮಂದಿಯೆಲ್ಲಾ ದಿಕ್ಕಪಾಲಾಗಿ ಓಡಿದ್ದಾರೆ. ಈ ವೇಳೆ ಅಲ್ಲೆ ಇದ್ದ ವ್ಯಕ್ತಿಯ ಮೇಲೆ ಗೂಳಿ ತನ್ನ ಪ್ರತಾಪ ತೋರಿದೆ. ಜೊತೆಗೆ ಅಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಈ ವಿಡಿಯೋ ಈಗ ವೈರಲ್ ಆಗಿದೆ. ಮತ್ತೊಂದು ದೃಶ್ಯಗಳಲ್ಲಿ ನಾಯಿಯೊಂದು ಡಿಕ್ಕಿ ಹೊಡೆದು ಮಹಿಳೆ ಮಗುಚಿ ಬಿದ್ದ ವೈರಲ್‌ ಆಗಿದೆ. ಸಮುದ್ರ ತೀರದಲ್ಲಿ ನಡೆದಾಡುತ್ತಿದ್ದ ಯುವತಿಯರ ಎದರು ಒಮ್ಮೆಲೆ ಮೂರು ನಾಯಿಗಳು ಬಂದಿದ್ದು, ವೇಗವಾಗಿ ಬರುತ್ತಿದ್ದ ನಾಯಿ ಡಿಕ್ಕಿಯಾಗಿ ಓರ್ವ ಮಹಿಳೆ ಮುಗ್ಗರಿಸಿ ಬಿದ್ದಿದ್ದಾಳೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.