Asianet Suvarna News Asianet Suvarna News

ಕಾಂಗ್ರೆಸ್‌ ನಿಲುವು ಸ್ವಾಗತಿಸಿ, ಬಿಜೆಪಿ ಕೂಡಾ ಕಾರ್ಯಕ್ರಮ ಕೈಬಿಡಲಿ ಎಂದ ಬಿಎಸ್‌ವೈ

ಕಾಂಗ್ರೆಸ್‌ ಮಡಿಕೇರಿ ಚಲೋ ಅಭಿಯಾನ ಕೈಬಿಟ್ಟಿರುವುದನ್ನು ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಅದೇ ರೀತಿ, ನಮ್ಮ ಪಕ್ಷದ ಕಾರ್ಯಕ್ರಮವೂ ರದ್ದಾಗಲಿ ಎಂದು ಸ್ವಪಕ್ಷೀಯರನ್ನೇ ಒತ್ತಾಯಿಸಿದ್ದಾರೆ. 
 

First Published Aug 23, 2022, 5:30 PM IST | Last Updated Aug 23, 2022, 5:30 PM IST

ಕಾಂಗ್ರೆಸ್‌ ಆಗಸ್ಟ್‌ 26 ರಂದು ಮಡಿಕೇರಿ ಚಲೋ ಅಭಿಯಾನ ಕೈಬಿಟ್ಟಿದೆ. ಈ ಹಿನ್ನೆಲೆ ಕಾಂಗ್ರೆಸ್‌ ನಿಲುವನ್ನು ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಶಾಂತಿ ಕಾಪಾಡಲು ಕಾಂಗ್ರೆಸ್‌ ತಮ್ಮ ಕಾರ್ಯಕ್ರಮವನ್ನು ರದ್ದು ಮಾಡಿದೆ. ಇದೇ ರೀತಿ, ಆಗಸ್ಟ್‌ 26 ರಂದು ಬಿಜೆಪಿ ಜನಜಾಗೃತಿ ಸಭೆಯನ್ನು ಇಟ್ಟುಕೊಂಡಿದ್ದು, ಕಾಂಗ್ರೆಸ್‌ನಂತೆ ನಮ್ಮ ಪಕ್ಷದ ಕಾರ್ಯಕ್ರಮವನ್ನೂ ಸಹ ಕೈಬಿಡಬೇಕು ಎಂದು ಸ್ವಪಕ್ಷೀಯರನ್ನು ಮಾಜಿ ಸಿಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ 144 ಸೆಕ್ಷನ್‌ ಹಾಕಿರುವ ಹಿನ್ನೆಲೆ ಕಾಂಗ್ರೆಸ್‌ ತಮ್ಮ ಮಡಿಕೇರಿ ಚಲೋ ಅಭಿಯಾನವನ್ನು ಮುಂದೂಡಿಕೆ ಮಾಡಿದೆ ಎನ್ನಲಾಗಿದೆ.

Video Top Stories