Asianet Suvarna News Asianet Suvarna News

ಮಂಡ್ಯದಲ್ಲಿ ‘ಅಪ್ಪು ಬಿರಿಯಾನಿ’ ಕಾರ್ನರ್: ಪುನೀತ್ ಅಭಿಮಾನಿ ಸಕ್ಸಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷ ಆಗುತ್ತಿದ್ದು, ಆದರೆ ಅಪ್ಪು ನೆನಪು ಅಜರಾಮರವಾಗಿ ಉಳಿದಿದೆ. ಪುನೀತ್ ಗುಣಗಳನ್ನು ಮಾದರಿಯಾಗಿ ಇಟ್ಟುಕೊಂಡು ಮಂಡ್ಯದಲ್ಲಿ ಅಭಿಮಾನಿಯೊಬ್ಬ ಅಪ್ಪು ನೆನಪಿನಲ್ಲಿ ಒಂದು ಉದ್ಯಮ ಆರಂಭಿಸಿದ್ದು, ಯಶಸ್ಸು ಸಾಧಿಸಿದ್ದಾನೆ.

First Published Oct 21, 2022, 6:01 PM IST | Last Updated Oct 21, 2022, 6:01 PM IST

ಮಂಡ್ಯದಲ್ಲಿ ಗುರು ಎನ್ನುವವರು ಅಪ್ಪು ಬಿರಿಯಾನಿ ಕಾರ್ನರ್ ಎನ್ನುವ ಉದ್ಯಮ ಆರಂಭಿಸಿದ್ದು, ಹೋಟೆಲ್ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಇದು ಅಪ್ಪು ಬಿರಿಯಾನಿ ಎಂದು ಮಂಡ್ಯದಲ್ಲಿ ಚಿರಪರಿಚಿತವಾಗಿದೆ. ಈ ಕುರಿತು ಹೋಟೆಲ್ ಮಾಲೀಕ ಗುರು ಮಾತನಾಡಿ, ನಾನು ಅಪ್ಪು ಅವರ ಅಭಿಮಾನಿ. ಮೊದಲು ಮೈಸೂರಿನಲ್ಲಿ ಹೋಟೆಲ್ ಇತ್ತು. ಶೂಟಿಂಗ್ ಬಂದಾಗ ಊಟ ತರಿಸಿಕೊಳ್ಳುತ್ತಿದ್ದರು. ಅವರ ಹೆಸರಲ್ಲಿ ಒಳ್ಳೆಯ ಊಟವನ್ನು ಕಡಿಮೆ ಬೆಲೆಯಲ್ಲಿ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
 

Video Top Stories