Asianet Suvarna News Asianet Suvarna News

ಕಿರಿಕ್ ಸುಂದರಿಯನ್ನು ನೋಡಲು ತೆಲಂಗಾಣದಿಂದ ವಿರಾಜಪೇಟೆಗೆ ಬಂದ ಫ್ಯಾನ್!

ಕೊಡಗಿನ ಸುಂದರಿ, ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ತೆಲಂಗಾಣದ ಅಭಿಮಾನಿಯೊಬ್ಬ ಕೊಡಗಿನ ವಿರಾಜಪೇಟೆಗೆ ಬಂದಿದ್ದಾನೆ. ಆಕಾಶ್ ತ್ರಿಪಾಠಿ ಎಂಬ ಈ ಅಭಿಮಾನಿ ರಶ್ಮಿಕಾಗೆ ಎಲ್ಲೆಡೆ ಹುಡುಕಾಡುತ್ತಿದ್ದ. ಇವನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರಿಸದ ಕಾರಣ ಬಂಧಿಸಿದ್ದಾರೆ. ಆಮೇಲೆ...?

ಕೊಡಗಿನ ಸುಂದರಿ, ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ತೆಲಂಗಾಣದ ಅಭಿಮಾನಿಯೊಬ್ಬ ಕೊಡಗಿನ ವಿರಾಜಪೇಟೆಗೆ ಬಂದಿದ್ದಾನೆ. ಆಕಾಶ್ ತ್ರಿಪಾಠಿ ಎಂಬ ಈ ಅಭಿಮಾನಿ ರಶ್ಮಿಕಾಗೆ ಎಲ್ಲೆಡೆ ಹುಡುಕಾಡುತ್ತಿದ್ದ. ಇವನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರಿಸದ ಕಾರಣ ಬಂಧಿಸಿದ್ದಾರೆ. ನಂತರ, ತಾನು ರಶ್ಮಿಕಾ ಅಭಿಮಾನಿಯಾಗಿದ್ದು, ನಟಿಯನ್ನು ನೋಡುವ ಬಯಕೆಯಿಂದ ಮೈಸೂರಿನ ತನಕ ರೈಲಲ್ಲಿ ಬಂದು, ನಂತರ ಗೂಡ್ಸ್ ಆಟೋದಲ್ಲಿ ವಿರಾಜಪೇಟೆಗೆ ಬಂದಿರುವುದಾದಿ ಹೇಳಿಕೊಂಡಿದ್ದಾರೆ. ಹೋಗಲಿ ಪಾಪವೆಂದು ವಿಚಾರಣೆ ನಡೆಸಿದ ಪೊಲೀಸರು ಎಚ್ಚರಿಕೆ ನೀಡಿ ರಿಶ್ಮಿಕಾ ಫ್ಯಾನ್ ಅನ್ನು ವಾಪಸ್ ಕಳುಹಿಸಿದ್ದಾರೆ. 

 ಸಿನಿಮಾ ಹಂಗಾಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Video Top Stories