ಕೆಂಗೇರಿಯಲ್ಲಿ ರ‍್ಯಾಂಬೋ ಸರ್ಕಸ್: ಸಕ್ಕತ್ ರೆಸ್ಪಾನ್ಸ್
ಬೆಂಗಳೂರಿನ ಕೆಂಗೇರಿಯಲ್ಲಿ ರ‍್ಯಾಂಬೋ ಸರ್ಕಸ್ ಶೋ ಆಯೋಜನೆ ಮಾಡಲಾಗಿದ್ದು, ಸಾವಿರಾರು ಜನ ಹೋಗುತ್ತಿದ್ದಾರೆ. ರ‍್ಯಾಂಬೋ ಸರ್ಕಸ್ ನಲ್ಲಿ ಸೀನಿಯರ್ ಜೋಕರ್ ವಿಜು ಪುಷ್ಕರಣ್ ಭಾಗಿಯಾಗಿದ್ದಾರೆ.
ರ‍್ಯಾಂಬೋ ಸರ್ಕಸ್ ಸೀನಿಯರ್ ಜೋಕರ್ ವಿಜು ಪುಷ್ಕರಣ್, ಬೆಂಗಳೂರಿಗೆ ಎರಡನೇ ಬಾರಿ ಬಂದಿದ್ದು, ಶೋ ಹೌಸ್ ಫುಲ್ ಆಗುತ್ತಿದೆ. ಬೆಂಗಳೂರಿನ ಜನ ಒಳ್ಳೆಯ ರೆಸ್ಪಾನ್ಸ್ ತೋರಿಸುತ್ತಿದ್ದಾರೆ. ಸರ್ಕಸ್ ಅಲ್ಲಿ ಕೆಲಸ ಮಾಡಲು ಖುಷಿ ಸಿಗುತ್ತದೆ. ಬೆಂಗಳೂರು ಪ್ರೇಕ್ಷಕರನ್ನು ನೋಡಿದರೆ ಸಂತೋಷವಾಗುತ್ತದೆ. ಬೆಂಗಳೂರು ಜನ ಹೆಚ್ಚು ಗೌರವವನ್ನು ಕೊಡುತ್ತಾರೆ. 23 ಕೊನೆ ದಿನಾಂಕವಾಗಿದ್ದು, ಎಲ್ಲರೂ ಬಂದು ಸರ್ಕಸ್ ನೋಡಿ ಎಂದು ಅವರು ಕೇಳಿಕೊಂಡಿದ್ದಾರೆ.