Asianet Suvarna News Asianet Suvarna News

ಕೋಟಿಗೊಬ್ಬ- 3 ರಿಲೀಸ್ ಆಗುವವರೆಗೆ ಹೋಗಲ್ಲ: ಸುದೀಪ್ ಅಭಿಮಾನಿಗಳ ಪಟ್ಟು

Oct 14, 2021, 2:40 PM IST

ಬೆಳಗಾವಿ (ಅ. 14): ಕೋಟಿಗೊಬ್ಬ-3 ವೀಕ್ಷಿಸಲು ಕಿಚ್ಚ ಸುದೀಪ್ ಅಭಿಮಾನಿಗಳು ಸಂತೋಷ್ ಥಿಯೇಟರ್‌ನಲ್ಲಿ ಕಿಕ್ಕಿರಿದು ತುಂಬಿದ್ದರು. ಇಂದು ಕೋಟಿಗೊಬ್ಬ-3 ರಿಲೀಸ್ ಆಗಲ್ಲ ಎನ್ನುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿಗೊಬ್ಬ-3 ರಿಲೀಸ್ ಆಗುವವರೆಗೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. 

ಇದಕ್ಕೂ ಮೊದಲು ಚಿತ್ರ ರಿಲೀಸ್‌ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ಒಬ್ಬರಿಗೆ ಗಾಯವಾಗಿದೆ. 

ವಿಜಯಪುರದಲ್ಲಿ ಸುದೀಪ್ ಅಭಿಮಾನಿಗಳ ಆಕ್ರೋಶ: ಥಿಯೇಟರ್ ಮೇಲೆ ಕಲ್ಲು

ತಾಂತ್ರಿಕ ಸಮಸ್ಯೆಯಿಂದ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಇಂದು ಬಿಡುಗಡೆ ಆಗುತ್ತಿಲ್ಲ. ಸಿನಿಮಾ ರಿಲೀಸ್‌ ಮಾಡದಂತೆ ಷಡ್ಯಂತ್ರ್ಯ ಮಾಡಿದ್ದಾರೆ, ಕೆಲವು ವಿತರಕರು ಮೋಸ ಮಾಡಿದ್ದಾರೆ ಇದರಲ್ಲಿ ನನ್ನ ತಪ್ಪಿಲ್ಲ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ ಎಂದು ನಿರ್ಮಾಪಕ ಸೂರಪ್ಪ ಬಾಬು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.