Asianet Suvarna News Asianet Suvarna News

'ರಾಬರ್ಟ್‌' ಗೆ ಕಿರಿಕ್, ರೊಚ್ಚಿಗೆದ್ದ ಚಾಲೆಜಿಂಗ್ ಸ್ಟಾರ್, ಟಾಲಿವುಡ್ ವಿರುದ್ಧ ಗರಂ

ದರ್ಶನ್ 'ರಾಬರ್ಟ್' ಸಿನಿಮಾವನ್ನು ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್‌ಗೆ ಚಿತ್ರತಂಡ ಸಜ್ಜಾಗಿತ್ತು. ಆದರೆ ತೆಲುಗಿನಲ್ಲಿ ರಾಬರ್ಟ್ ರಿಲೀಸ್ ಸಾಧ್ಯವಿಲ್ಲ ಎಂದು ಕಿರಿಕ್ ಎದುರಾಗಿತ್ತು. ಈ ಬಗ್ಗೆ ದರ್ಶನ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

First Published Jan 29, 2021, 3:13 PM IST | Last Updated Jan 29, 2021, 3:18 PM IST

ಬೆಂಗಳೂರು (ಜ. 29): ದರ್ಶನ್ 'ರಾಬರ್ಟ್' ಸಿನಿಮಾವನ್ನು ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್‌ಗೆ ಚಿತ್ರತಂಡ ಸಜ್ಜಾಗಿತ್ತು. ಆದರೆ ತೆಲುಗಿನಲ್ಲಿ ರಾಬರ್ಟ್ ರಿಲೀಸ್ ಸಾಧ್ಯವಿಲ್ಲ ಎಂದು ಕಿರಿಕ್ ಎದುರಾಗಿತ್ತು. ಈ ಬಗ್ಗೆ ದರ್ಶನ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ತೆರೆಗೆ ಬರಲು ಸಿದ್ಧನಾಗಿದ್ದ ರಾಬರ್ಟ್‌ಗೆ ಅಡ್ಡಗಾಲು! ದರ್ಶನ್ ಕಂಗಾಲು 

'ನಮ್ಮ ಮನವಿಗಳಿಗೆ ಫಿಲ್ಮ್‌ ಚೇಂಬರ್ ಒಪ್ಪಿದೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ನಿರ್ಮಾಪಕರು ನಮ್ಮನ್ನು ನಂಬಿ ಹಣ ಹಾಕ್ತಾರೆ. ಹಾಗಾಗಿ ನಾವೆಲ್ಲರೂ ಇದರ ವಿರುದ್ಧ ಹೋರಾಡಬೇಕು. ತೆಲುಗು ಸಿನಿಮಾಗಳು ಬಂದರೆ ನಾವು ಸಹಿಸಿಕೊಳ್ಳುತ್ತೇವೆ. ಅದೇ ಕನ್ನಡ ಸಿನಿಮಾ ಆದ್ರೆ ಬಿಡಲ್ಲ ಅಂತಾರೆ. ಇದು ನಾವೇ ಮಾಡಿಕೊಂಡದ್ದು' ಎಂದು ದರ್ಶನ್ ಹೇಳಿದ್ದಾರೆ. 

Video Top Stories