Asianet Suvarna News Asianet Suvarna News

ಅಪ್ಪು ಫ್ಯಾನ್ಸ್‌ ಮಹತ್ವದ ನಿರ್ಧಾರ, ಕಟೌಟ್‌ ಹಣದಲ್ಲಿ ಶಾಲಾ ಮಕ್ಕಳಿಗೆ ಸಿನಿಮಾ ಶೋ!

ಬಳ್ಳಾರಿಯಲ್ಲಿ ಗಂಧದ ಗುಡಿ ಹವಾ ಜೋರಾಗಿದೆ. ಮುತ್ತುರಾಜ್ ಅಭಿಮಾನಿಗಳ ಬಳಗದಿಂದ ಕಟೌಟ್ , ಬ್ಯಾನರ್‌ಗೆ ಹಣ ಖರ್ಚು ಮಾಡದಿರಲು ನಿರ್ಧರಿಸಲಾಗಿದೆ. ಈ ಮೂಲಕ ಶಾಲಾ ಮಕ್ಕಳಿಗೆ ಸಿನೆಮಾ ತೋರಿಸಲು ತೀರ್ಮಾನಿಸಲಾಗಿದೆ.

First Published Oct 27, 2022, 8:54 PM IST | Last Updated Oct 27, 2022, 8:54 PM IST

ಬಳ್ಳಾರಿ (ಅ.27): ವರ್ಷ ಕಳೆದರೂ ಪುನೀತ್ ರಾಜ್‌ ಕುಮಾರ್ ಮರಣವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅಪ್ಪು ಕಣ್ಮರೆಯಾದರು ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ. ಇದೀಗ ಅವರ ಗಂಧದ ಗುಡಿ ಸಿನೆಮಾ ಬಿಡುಗಡೆಯಾಗುತ್ತಿದೆ. ಬಳ್ಳಾರಿಯಲ್ಲಿ ಗಂಧದ ಗುಡಿ ಹವಾ ಜೋರಾಗಿದೆ. ಮುತ್ತುರಾಜ್ ಅಭಿಮಾನಿಗಳ ಬಳಗದಿಂದ ಕಟೌಟ್ , ಬ್ಯಾನರ್‌ಗೆ ಹಣ ಖರ್ಚು ಮಾಡದಿರಲು ನಿರ್ಧರಿಸಲಾಗಿದೆ. ಈ ಮೂಲಕ ಶಾಲಾ ಮಕ್ಕಳಿಗೆ ಸಿನೆಮಾ ತೋರಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದ ಕಾಡಿನ ಬಗ್ಗೆ  ಸಿನೆಮಾ ಆಗಿರುವುದರಿಂದ, ಜೊತೆಗೆ ಹಣವನ್ನು ಪೊಲೋ ಮಾಡುವುದು ಬೇಡ ಎಂಬ ಉದ್ದೇಶದಿಂದ  ಸುಮಾರು 2000 ಸರಕಾರಿ ಮಕ್ಕಳಿಗೆ ಉಚಿತವಾಗಿ ಸಿನೆಮಾ ತೋರಿಸಲು ನಿರ್ಧಾರ ಕೈಗೊಳ್ಳಲಾಗಿದೆ. 

Video Top Stories