Asianet Suvarna News Asianet Suvarna News

ನಟಿ ಸೌಜನ್ಯಾ ಆತ್ಮಹತ್ಯೆಗೆ ಟ್ವಿಸ್ಟ್, ಇದು ಸ್ವಯಂಪ್ರೇರಿತವಲ್ಲ, ಕಿರುಕುಳವೇ ಕಾರಣ.?

ಡೆತ್‌ನೋಟ್‌ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟುಹೇಡಿ ಅಲ್ಲ. ಸಾವಿನ ಬಗ್ಗೆ ಅನುಮಾನ ಇದೆ: ತಂದೆ ಮಾದಪ್ಪ 

ಬೆಂಗಳೂರು (ಅ. 01): ಯುವ ನಟಿ, ಕೊಡಗಿನ ಸೌಜನ್ಯ ಅಲಿಯಾಸ್‌ ಸವಿ ಮಾದಪ್ಪ (25) ಡೆತ್‌ನೋಟ್‌ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಡೆತ್‌ನೋಟ್ ಪತ್ತೆ!

' ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟುಹೇಡಿ ಅಲ್ಲ. ಸಾವಿನ ಬಗ್ಗೆ ಅನುಮಾನ ಇದೆ. ನನ್ನ ಮಗಳಿಗೆ ಕನ್ನಡ, ತೆಲುಗು ಕಿರುತೆರೆ ನಟ ವಿವೇಕ್ ಎಂಬಾತ ಪರಿಚಯವಿದ್ದ. ಮದುವೆ ಆಗು ಎಂದು ಮಗಳಿಗೆ ಕಿರುಕುಳ ನೀಡುತ್ತಿದ್ದ. ಆತನೇ ಬೆಳಿಗ್ಗೆ ಬಂದು ಕಿರುಕುಳ ನೀಡಿರುವ ಸಾಧ್ಯತೆ ಇದೆ' ಎಂದು ತಂದೆ ಮಾದಪ್ಪ ದೂರು ನೀಡಿದ್ದಾರೆ.