'ಅವತಾರ ಪುರುಷ' ಶೂಟಿಂಗ್ ವೇಳೆ ನಟ ಶರಣ್‌ಗೆ ಅನಾರೋಗ್ಯ; ಆಸ್ಪತ್ರೆಗೆ ನಟಿ ಶೃತಿ ಭೇಟಿ
'ಅವತಾರ ಪುರುಷ' ಚಿತ್ರದ ಶೂಟಿಂಗ್ ವೇಳೆ ನಟ ಶರಣ್‌ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ಶೃತಿ ಆಸ್ಪತ್ರೆಗೆ ಭೇಟಿ ನೀಡಿ ಅಣ್ಣನ ಆರೋಗ್ಯ ವಿಚಾರಿಸಿದ್ದಾರೆ.
ಬೆಂಗಳೂರು (ಸೆ. 26):'ಅವತಾರ ಪುರುಷ' ಚಿತ್ರದ ಶೂಟಿಂಗ್ ವೇಳೆ ನಟ ಶರಣ್‌ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ಶೃತಿ ಆಸ್ಪತ್ರೆಗೆ ಭೇಟಿ ನೀಡಿ ಅಣ್ಣನ ಆರೋಗ್ಯ ವಿಚಾರಿಸಿದ್ದಾರೆ.
ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ನಟ ಶರಣ್
ಕಿಡ್ನಿ ಸ್ಟೋನ್ ಆಗಿರುವುದರಿಂದ ಹೊಟ್ಟೆನೋವು ಕಾಣಿಸಿಕೊಂಡಿದೆ. ದೊಡ್ಡ ಸಮಸ್ಯೆ ಏನೂ ಆಗಿಲ್ಲ. ಎರಡು ದಿನಗಳಿಂದಲೂ ಹೊಟ್ಟೆನೋವು ಇತ್ತು. ಅವತಾರ ಪುರುಷ ಶೂಟಿಂಗ್ ಇದ್ದಿದ್ದರಿಂದ ಮನೆಯಲ್ಲಿ ಹೇಳಿರಲಿಲ್ಲ. ಶೂಟಿಂಗ್‌ಗೆ ತೊಂದರೆಯಾಗಬಾರದು ಎಂದು ಹೋಗಿದ್ದಾಗ ಹೊಟ್ಟೆನೋವು ಕಾಣಿಸಿಕೊಂಡಿದೆ. ಕಿಡ್ನಿಯಲ್ಲಿ ಸ್ಟೋನ್ಸ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ' ಎಂದು ಶೃತಿ ಮಾಧ್ಯಮಗಳೊಂದಿಗೆ ಹೇಳಿದ್ದಾರೆ.